ಎಸ್ಐಆರ್ ಬಗ್ಗೆ ಜಾಗೃತಿ ಮೂಡಿಸಲು ವಿಕಲಚೇತನರ ಬೈಕ್ ಜಾಥಾ

0

ಚುನಾವಣಾ ಗುರುತಿನ ಚೀಟಿ ಎಸ್ಐಆರ್ ಬಗ್ಗೆ ಜಾಗೃತಿ ಮೂಡಿಸಲು ವಿಕಲಚೇತನರ ಬೈಕ್ ಜಾಥಾ ಸೆ. 17 ರಂದು ಸುಳ್ಯ ಪೇಟೆಯಲ್ಲಿ ನಡೆಯಿತು.

ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಜಾಥಾಕ್ಕೆ ಚಾಲನೆ ನೀಡಿದರು.

ನಗರ ಪ್ರಾಧಿಕಾರ ಅಧ್ಯಕ್ಷ ಮುಸ್ತಫಾ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ತಾಲೂಕು ಪಂಚಾಯತ್ ಇಓ ರಾಜಣ್ಣ, ತಹಶೀಲ್ದಾರ್ ಮಂಜುಳಾ, ಮ್ಯಾನೇಜರ್ ರಾಜಲಕ್ಷ್ಮಿ, ವಿಕಲ ಚೇತನರ ಇಲಾಖೆಯ ಚಂದ್ರ ಶೇಖರ್, ಪ್ರವೀಣ್ ನಾಯಕ್ ಸುಳ್ಯ, ಪುಟ್ಟಣ್ಣ, ಮಾಜಿ ಸದಸ್ಯ ರಾದ ಅಶ್ರಫ್, ವಿಕಲಚೇತನರ ಕಾರ್ಯಕರ್ತರು, ವಿಕಲ ಚೇತನರು ಮತ್ತಿತರರು ಹಾಜರಿದ್ದರು. ತಾಲೂಕು ಪಂಚಾಯತ್ ಇ ಒ ರಾಜಣ್ಣರವರು ಮಾತನಾಡಿ ಎಸ್ ಐ ಆರ್ ಮಹತ್ವದ ಬಗ್ಗೆ ತಿಳಿಸಿದರು.