













ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಸುಳ್ಯ ವಲಯ ಇದರ ವತಿಯಿಂದ ವಿಶ್ವಕರ್ಮ ಪೂಜೆಯನ್ನು ಸೆ. ೧೭ರಂದು ಶಿವ ಕೃಪ ಕಲಮಂದಿರದಲ್ಲಿ ನಡೆಸಲಾಯಿತು. ಹಾಗೂ ನಿವೃತ್ತ ಯೋಧರಾದ ಕೃಷ್ಣಯ್ಯ ಆಚಾರ್ಯ ಕಾಯರ್ತೋಡಿ ಮತ್ತು ಸಮಾಜ ಸೇವಕರಾದ ಉಮೇಶ ಆಚಾರ್ಯ ಜಯನಗರರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುರುಷೋತ್ತಮ ಆಚಾರ್ಯ ವಹಿಸಿದರು. ಗೌರವ ಉಪಸ್ಥಿತಿ ಕಾಲಿಕಾ ದುರ್ಗಾಪರಮೇಶ್ವರಿ ಕ್ಷೇತ್ರ ಮೇನಾಲ ಇದರ ಇದರ ಧರ್ಮದರ್ಶಿಗಳಾದ ಪದ್ಮನಾಭ ಆಚಾರ್ಯ ಮತ್ತು ಧಾರ್ಮಿಕ ಉಪನ್ಯಾಸಕರಾಗಿ ಪುರೋಹಿತರು ಪದ್ಮನಾಭ ಆಚಾರ್ಯ ಉಪ್ಪಿನಂಗಡಿ ಬಲ್ಲ ಮಂಜ ಇವರು ನೆರವೇರಿಸಿ ಕೊಟ್ಟರು. ದೀಪಕ್ ಆಚಾರ್ಯ ಕುಂಟಿಕಾನ ಸ್ವಾಗತಿಸಿ, ದೀಪಕ್ ಆಚಾರ್ಯ ಕಾಯರ್ತೋಡಿ ವಂದಿಸಿದರು.







