ಕೇರ್ಪಡ ಶ್ರೀ ಮಹಿಷ ಮರ್ದಿನೀ ದೇವಸ್ಥಾನ ನವರಾತ್ರಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

0

ಶ್ರೀ ಮಹಿಷ ಮರ್ದಿನೀ ದೇವಸ್ಥಾನ ಕೇರ್ಪಡ ಇಲ್ಲಿ ಪೂರ್ವ ಶಿಷ್ಟ ಪ್ರಕಾರ ಅಕ್ಟೋಬರ್ 10 ರಿಂದ ನವರಾತ್ರಿ ಉತ್ಸವ ಪ್ರಾರಂಭ ಗೊಂಡು ಹತ್ತು ದಿನ ಉತ್ಸವ ನಡೆಯಲಿರುವುದು.


ಅದರ ಅಂಗವಾಗಿ ಸೆ 18 ರಂದು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎನ್ ಜಿ ಲೋಕನಾಥ ರೈ ಯವರ ಉಪಸ್ಥಿಯಲ್ಲಿ ಪ್ರದಾನ ಅರ್ಚಕರಾದ ಶ್ರೀ ಹರಿ ಕುಂಜೂರಾಯರ ವೈಧಿಕ ಕಾರ್ಯ ಕ್ರಮಗಳೊಂದಿಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಂಡು ಸೇವಾ ಸಮಿತಿಯವರಿಗೆ ಹಂಚಿಕೆ ಮಾಹಿತಿ ನೀಡಲಾಯಿತು.

ವರದಿ : ಎ ಎಸ್ ಎಸ್.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯ ರಾದ ವಾಚಣ್ಣ ಗೌಡ ಹುದೇರಿ, ಶ್ರೀಮತಿ ಗುಣವತಿ ನಾವೂರು, ವೇಣುಗೋಪಾಲ ರೈ ಪೂದ್ಕೆ ತೂರು, ಬಿಜಿಲ ಅಲೆಕ್ಕಾಡಿ,, ಸಿಬ್ಬಂದಿ ರಾಮಚಂದ್ರ ಪೂಜಾರಿ, ನೂಜಾಡಿ, ಭಜನಾ ಮಂಡಳಿ ಅಧ್ಯಕ್ಷ ಅರೇಂಬಿ ಸುಂದರ ಗೌಡ , ಚೆನ್ನಪ್ಪ ಗೌಡ ಕೇರ್ಪಡ, ಸೇವಾ ಸಮಿತಿ ಪದಾಧಿಕಾರಿಗಳು, ನಿಂತಿಕಲ್ಲು ಶ್ರೀ ದೇವಿ ಅಗ್ರಿ ಟೇಕ್ ಸಂಸ್ಥೆಯ ಮಾಲಕ ತಿಮ್ಮಪ್ಪ ರೈ ಭಜದ ಗುತ್ತು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.