ನಾಲ್ಕೂರು ಗ್ರಾಮಸ್ಥರಿಂದ ಕಸ್ತೂರಿ ರಂಗನ್ ವರದಿ ವಿರುದ್ಧ ಪತ್ರಭಿಯಾನ

0

ನಾಲ್ಕೂರು ಗ್ರಾಮಸ್ಥರಿಂದ ಕಸ್ತೂರಿ ರಂಗನ್ ವರದಿ ವಿರುದ್ಧ ಪತ್ರಭಿಯಾನ ನಡೆದಿದ್ದು
ಒಂದೇ ದಿನದಲ್ಲಿ 300ಕ್ಕೂ ಹೆಚ್ಚು ವೈಯಕ್ತಿಕ ಆಕ್ಷೇಪಣೆ ಸಲ್ಲಿಕೆಯಾಗಿದೆ.

ನಡುಗಲ್ಲು ಅಂಚೆ ಕಛೇರಿ ಬಳಿ ಸಮಾನಮನಸ್ಕರು ಆಯೋಜಿಸಿದ್ದ ಆಕ್ಷೇಪಣೆ ಸಲ್ಲಿಕೆ ಅಭಿಯಾನದಲ್ಲಿ ಗ್ರಾಮಸ್ಥರು 300ಕ್ಕೂ ಹೆಚ್ಚು ರಿಜಿಸ್ಟರ್ ಪೋಸ್ಟ್ ಅನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ದೆಹಲಿಗೆ ಕಳುಹಿಸಿದರು.

ಸಮಾನಮನಸ್ಕರು ಸೇರಿ ಅಂಚೆ ಕಚೇರಿಯ ಬಳಿ ಇರುವ ಬಸ್ ಸ್ಟ್ಯಾಂಡಿನಲ್ಲಿ ಸ್ಕ್ಯಾನರ್ ಪ್ರಿಂಟರ್ ಆಕ್ಷೇಪಣೆ ಪತ್ರ ಎಲ್ಲವನ್ನು ವ್ಯವಸ್ಥೆ ಮಾಡಿ ಬರೆದುಕೊಡುವ ವ್ಯವಸ್ಥೆ ಮಾಡಿದ್ದರು.