ಅಧ್ಯಕ್ಷರಾಗಿ ಎ.ಸಿ.ವಸಂತ, ಕಾರ್ಯದರ್ಶಿಯಾಗಿ ರಂಗನಾಥ














ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಶನ್ ಮಹಾಸಭೆಯು ಸೆ.13 ರಂದು ನಡೆಯಿತು. ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎ.ಸಿ.ವಸಂತ, ಕಾರ್ಯದರ್ಶಿಯಾಗಿ ಸುಳ್ಯ ರೋಟರಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ರಂಗನಾಥ್, ಕೋಶಾಧಿಕಾರಿಯಾಗಿ ತೀರ್ಥವರ್ಣ ಬಳ್ಳಡ್ಕ ಆಯ್ಕೆಯಾದರು.
ಅಸೋಯೇಶನ್ ನಿರ್ಣಾಯಕರ ಮಂಡಳಿಯ ಅಧ್ಯಕ್ಷರಾಗಿ ವೀರನಾಥ ಬೆಳ್ಳಾರೆ ಇವರು ಆಯ್ಕೆಯಾಗಿದ್ದಾರೆ.







