ಜಿಲ್ಲೆಯ ಅಭಿವೃದ್ಧಿಗೆ ಬಹುದೊಡ್ಡ ಹೆಜ್ಜೆಟಯರ್ ಫ್ಯಾಕ್ಟರಿ ಮತ್ತು ಕೈಗಾರಿಕಾ ಪ್ರದೇಶಕ್ಕೆ ಪ್ರಯತ್ನ : ಭರತ್ ಮುಂಡೋಡಿ

0

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿದ್ದು ಐತಿಹಾಸಿಕ ತೀರ್ಮಾನ, ತುಳುವರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿದಂತಹ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಜಿಲ್ಲೆಯ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿಗೆ ಸಂಪುಟ ಸಭೆ ಕೊಡಲು ನಿರ್ಧರಿಸಿದ ಅನುದಾನ ಜಿಲ್ಲೆಯನ್ನು ಪರಿವರ್ತಿಸುವ ನಿಟ್ಟಿನಲ್ಲಿ ಇಡಲಾದ ಬಹುದೊಡ್ಡ ಹೆಜ್ಜೆ .
ಸುಳ್ಯಕ್ಕೆ ಸಂಬಂಧಿಸಿ ಕೆಎಫ್‌ಡಿಸಿ ಮೂಲಕ ಟಯರ್ ಫ್ಯಾಕ್ಟರಿ ಸ್ಥಾಪಿಸುವ ಬಗ್ಗೆ ಹಾಗೂ ಸುಳ್ಯ ತಾಲೂಕಿನಲ್ಲಿ ದೊಡ್ಡದಾದ ಕೈಗಾರಿಕಾ ಪ್ರದೇಶವವನ್ನು ಸ್ಥಾಪಿಸುವ ಬಗ್ಗೆ ನಮ್ಮ ಬೇಡಿಕೆಯನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿzನೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ೧೬೦೦ ಕೋಟಿ ರೂ.ಗಳನ್ನು ಇರಿಸಲು ನಿರ್ಧರಿಸಿದ್ದಾರೆ. ಸುಳ್ಯ-ಜಟ್ಟಿಪಳ್ಳ-ಕೊಡಿಯಾಲಬೈಲ್- ದುಗಲಡ್ಕ ರಸ್ತೆಯ ಅಭಿವೃದ್ಧಿಯ ವಿಚಾರ ಸೇರಿದಂತೆ ಹಲವು ರಸ್ತೆಗಳ ಅಭಿವೃದ್ಧಿಗೆ ಮನವಿ ಕೊಟ್ಟಿzವರ. ಇನ್ನು ನಮ್ಮ ಪ್ರಯತ್ನ, ಶಾಸಕರ ಪ್ರಯತ್ನ ಎಲ್ಲಾ ಇದ್ದರೆ ಅನುದಾನ ಖಂಡಿತ ಬರುತ್ತದೆ.
-ಭರತ್ ಮುಂಡೋಡಿ
ಅಧ್ಯಕ್ಷರು, ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ