














ಆಲೆಟ್ಟಿ ಪೇಟೆಯಲ್ಲಿ ಮಲಗಿದ್ದ ದನದ ಕರುವಿಗೆ ಅಪರಿಚಿತರ ವಾಹನವೊಂದು ಡಿಕ್ಕಿ ಹೊಡೆದು ಕರುವಿನ ಕಾಲು ಮುರಿತಕ್ಕೊಳಗಾದ ಘಟನೆ ವರದಿಯಾಗಿದೆ.
ಅಪರಿಚಿತರ ವಾಹನವೊಂದು ಬೆಳಗ್ಗಿನ ಜಾವದಲ್ಲಿ ಕರುವಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕರುವಿನ ಕಾಲು ಮುರಿತಕ್ಕೊಳಪಟ್ಟು ರಸ್ತೆಯಲ್ಲಿ ಬಿದ್ದುಕೊಂಡಿತ್ತು. ಬಳಿಕ ಸ್ಥಳೀಯ ಅಂಗಡಿಯವರು ಮತ್ತು ಯುವಕರು ಸೇರಿ ಕರುವನ್ನು ಎತ್ತಿಕೊಂಡು ಬಂದು ಮರದ ಕೆಳಗೆ ಮಲಗಿಸಿ ಆರೈಕೆ ಮಾಡಿದರು. ಸುಳ್ಯದಿಂದ ಪಶು ವೈದ್ಯರನ್ನು ಕರೆ ತಂದು ಕರುವಿಗೆ ಚಿಕಿತ್ಸೆ ಕೊಡಿಸಿದರು. ಮಲಗಿದಲ್ಲಿರುವ ಕರುವಿಗೆ ದಿನ ನಿತ್ಯ ಆಹಾರ, ನೀರು ನೀಡಿ ಆರೈಕೆ ಮಾಡುವ ಕಾಯಕದಲ್ಲಿ ಸ್ಥಳೀಯ ಯುವಕರುಮಾನವೀಯತೆ ಮೆರೆದಿದ್ದಾರೆ.







