ಸಂಪಾಜೆ ಪಯಸ್ವಿನಿ ಪ್ರಾ ಕೃ ಪ ಸಹಕಾರ ಸಂಘಕ್ಕೆ ಸ್ಕ್ಯಾಡ್ಸ್ ಸಮಗ್ರ ಪ್ರಶಸ್ತಿ

0
ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತಮ್ಮ ಕೃಷಿಕರಿಗೆ ಕೃಷಿ ಯಂತ್ರೋಪಕರಣಗಳ ಪೂರೈಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಕೃಷಿ ಅಭಿವೃದ್ದಿ ಸಹಕಾರ ಸಂಘ ,ಕೊಡಮಾಡುವ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸೆ.23ರಂದು ಮಂಗಳೂರಿನಲ್ಲಿ ನಡೆದ ಸ್ಕ್ಯಾಡ್ಸ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ,ಸಂಸ್ಥೆಯ ಅದ್ಯಕ್ಷರಾದ ಶ್ರೀ ರವೀಂದ್ರ ಕಂಬಳಿಯವರು ಪಯಸ್ವಿನಿ ಅದ್ಯಕ್ಷರಾದ ಶ್ರೀ ಅನಂತ್ ಊರುಬೈಲು ಮತ್ತು ಸಿಇಓ.ಶ್ರೀ ಆನಂದ .ಬಿ.ಕೆ ರವರಿಗೆ ಶಾಲು ಹೊದೆಸಿ,ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀ. ಹೊನ್ನಪ್ಪ ಕಾಸ್ಪಾಡಿ ,ಪೆರಾಜೆ ಸೊಸೈಟಿ ನಿರ್ದೇಶಕಿ ಶ್ರೀಮತಿ ಪ್ರಮೀಳಾ ಭಾರದ್ವಜ್ ಉಪಸ್ಥಿತರಿದ್ದರು