













ಜ್ಯೋತಿ ವಿದ್ಯಾಸಂಘ ಪೆರಾಜೆ ಇದರ ಆಡಳಿತದಲ್ಲಿ ಬೆಂಗಳೂರು ಪ್ರಣವ ಫೌಂಡೇಶನ್ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆದ ಜ್ಯೋತಿ ಪೂರ್ವ ಪ್ರಾಥಮಿಕ ಶಾಲೆಯ ಪೋಷಕರ ಸಭೆ ಹಾಗೂ 2026-2027 ನೇ ಸಾಲಿನ ನೂತನ ಪೋಷಕರ ಸಂಘದ ರಚನೆಯು ಜ್ಯೋತಿ ವಿದ್ಯಾಸಂಘದ ಅಧ್ಯಕ್ಷರಾದ ರಾಕೇಶ್ ರೈ ಇವರ ಅಧ್ಯಕ್ಷತೆಯಲ್ಲಿ ಸೆ. 24 ರಂದು ನಡೆಯಿತು.

ಸಭೆಯ ಪ್ರಾರ್ಥನೆಯನ್ನು ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಡೆಸಿದರು. ಸಭೆಯಲ್ಲಿ ಜ್ಯೋತಿ ವಿದ್ಯಾಸಂಘದ ಉಪಾಧ್ಯಕ್ಷರಾದ ಶ್ರೀಮತಿ ಸುಮಾನಾಗರಾಜ್,ಕಾರ್ಯದರ್ಶಿಗಳಾದ ರಕ್ಷಿತ್ ಕೆಪಿ ಸಂಚಾಲಕರಾದ ದೀಪಕ್ ಎಂ. ರಾಜ್, ಮಹೇಶ್ ಕುಮಾರ್ ಕೋಶಾಧಿಕಾರಿಗಳಾದ ಮಂಜುನಾಥ ಭಟ್ , ನಿರ್ದೇಶಕರಾದ ಶ್ರೀಮತಿ ಕವನ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಗತಿ ಮತ್ತು ಪೋಷಕರ ಅಭಿಪ್ರಾಯಗಳನ್ನು ಚರ್ಚಿಸಲಾಯಿತು. ಬಳಿಕ ಮುಂಬರುವ ಶಾಲೆಯ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವರೇ ನೂತನ ಪೋಷಕರ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಜಯಪ್ರಕಾಶ್,ಉಪಾಧ್ಯಕ್ಷರಾಗಿ ಶರತ್ ಕೆ ಕೆ ಮತ್ತು ಕಾರ್ಯದರ್ಶಿಗಳಾಗಿ ಚರಣ್ ಕೆ ಸಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಎಲ್ಲಾ ಪೋಷಕರನ್ನು ಸದಸ್ಯರಾಗಿ ನಾಮನಿರ್ದೇಶನ ಮಾಡಲಾಯಿತು. ಜ್ಯೋತಿ ವಿದ್ಯಾ ಸಂಘದ ಕಾರ್ಯದರ್ಶಿಗಳಾದ ರಕ್ಷಿತ್ ಇವರಿಂದ ಸಮಿತಿಯ ನಡಾವಳಿ ಪುಸ್ತಕವನ್ನು ಹೊಸ ಸಮಿತಿಗೆ ಹತ್ತಾಂತರಿಸಲಾಯಿತು. ಸಂಸ್ಥೆಯ ಶಿಕ್ಷಕಿ ಶ್ರೀಮತಿ ಶ್ರೀಲತಾ ಆಚಾರ್ಯ ಸ್ವಾಗತಿಸಿ , ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.







