ಕೆನರಾ ಬ್ಯಾಂಕಿನ ಗ್ರಾಹಕರಿಗೆ ಸಿಹಿ ಸುದ್ದಿ

0

ಸೆಪ್ಟೆಂಬರ್ 28 ರಿಂದ 30ರವರೆಗೆ ಬ್ಯಾಂಕ್ ಮುಷ್ಕರವಿದ್ದರೂ ಎಂದಿನಂತೆ ಕಾರ್ಯನಿರ್ವಹಿಸಲಿರುವ ಕೆನರಾ ಬ್ಯಾಂಕ್

ಸೆಪ್ಟೆಂಬರ್ 28 ರಿಂದ 30 ರ ವರೆಗೆ ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ನೌಕರರು ಮುಷ್ಕರ ಘೋಷಿಸಿದ್ದು, ಮೂರು ದಿನಗಳ ಕಾಲ ಬ್ಯಾಂಕ್ ವ್ಯವಹಾರ ಸ್ಥಬ್ಧಗೊಳ್ಳಲಿದೆ. ಇದರಿಂದ ಗ್ರಾಹಕರು ಸಂಕಷ್ಟ ಅನುಭವಿಸುವುದಂತೂ ಖಚಿತ.

ಈ ನಡುವೆ ಕೆನರಾ ಬ್ಯಾಂಕ್ ವತಿಯಿಂದ ಆ ಬ್ಯಾಂಕಿನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. ಈ ಮೂರು ದಿನಗಳು ಕೂಡ ಕೆನರಾ ಬ್ಯಾಂಕಿನ ಎಲ್ಲಾ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಸುಳ್ಯ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಸುದ್ದಿಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಸೆಪ್ಟೆಂಬರ್ 27 ರಂದು ಭಾನುವಾರ ದೇಶದ ಎಲ್ಲಾ ಸಾರ್ವಜನಿಕ ವಲಯ ಹಾಗೂ ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕಿದ್ದು, ರಿಸರ್ವ್ ಬ್ಯಾಂಕ್ (RBI) ಇದಕ್ಕೆ ಅನುಮೋದನೆ ನೀಡಿತ್ತು.