ಪಂಜ ಪರಿಸರದ ನಾಡ ಹಬ್ಬ 17 ನೇ ವರ್ಷದ ಶ್ರೀ ಶಾರದೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

0

🔶 ಅ. 21 ರಂದು ವಿಜೃಂಭಣೆಯ ಶ್ರೀ ಶಾರದೋತ್ಸವ

ಶ್ರೀ ಶಾರದಾಂಬಾ ಭಜನಾ ಮಂಡಳಿ(ರಿ)
ಪಂಜ, ಶ್ರೀ ಶಾರದೋತ್ಸವ ಸಮಿತಿ-2026
ಇದರ ಆಶ್ರಯದಲ್ಲಿ
ಪಂಜ ಪರಿಸರದ ನಾಡ ಹಬ್ಬ 17 ನೇ ವರ್ಷದ ಶ್ರೀ ಶಾರದೋತ್ಸವವು ಅ. 21 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.


.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೆ. 27 ರಂದು ನಡೆಯಿತು.

ಶ್ರೀ ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಜಾಕೆ ಮಾಧವ ಗೌಡರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಧರ್ಮಪಾಲ ಮರಕ್ಕಡ ಸಭಾಧ್ಯಕ್ಷತೆ ವಹಿಸಿದ್ದರು.ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ,ಶ್ರೀ ಶಾರದೋತ್ಸವ ಸಮಿತಿ
ಕಾರ್ಯದರ್ಶಿ ಉಜ್ವಲ್ ಚಿದ್ಗಲ್ಲು, ಕೋಶಾಧಿಕಾರಿ ಶ್ರೀಮತಿ ನಳಿನಿ ಮಂಚಿಕಟ್ಟೆ, ಉಪಾಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಭಜನಾ ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗುರುಪ್ರಸಾದ್ ತೋಟ ಸ್ವಾಗತಿಸಿದರು.ಉಜ್ವಲ್ ಚಿದ್ಗಲ್ಲು ವಂದಿಸಿದರು.
ಶ್ರೀ ಶಾರದೋತ್ಸವ ಸಮಿತಿ ಪದಾಧಿಕಾರಿಗಳು,
ಶ್ರೀ ಶಾರದಾಂಬಾ ಭಜನಾ ಮಂಡಳಿ
ಪದಾಧಿಕಾರಿಗಳು, ವಿವಿಧ ಸಮಿತಿಗಳ
ಸಂಚಾಲಕರು, ಸದಸ್ಯರು ಪಾಲ್ಗೊಂಡಿದ್ದರು.