













ವಲಯ ಮಟ್ಟದ ಅತ್ಯುತ್ತಮ ವಲಯ ತರಬೇತುದಾರರಿಗೆ ಕೊಡ ಮಾಡುವ ವಲಯ ಮಟ್ಟದ ಪ್ರೇರಣಾ ಪ್ರಶಸ್ತಿ 2026 ಬೆಳ್ಳಾರೆ ಜೇಸಿಸ್ ನ ಪೂರ್ವಾಧ್ಯಕ್ಷ ವಲಯ ತರಬೇತುದಾರ ಲಿಂಗಪ್ಪ ಬೆಳ್ಳಾರೆ ಇವರಿಗೆ ಮಂಗಳೂರಿನಲ್ಲಿ ಸೆ.27 ರಂದು ನಡೆದ ವಲಯ ಮಟ್ಟದ ಕಾರ್ಯಕ್ರಮ ಆರೋಹಣ 2026 ರಲ್ಲಿ ನೀಡಿ ಗೌರವಿಸಲಾಯಿತು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ,ಜೇಸಿ ಸದಸ್ಯರಿಗೆ ,ಶಿಕ್ಷಕರಿಗೆ, ಹಾಗೂ ಚುನಾವಣಾ ಕಾರ್ಯದಲ್ಲಿ ತರಬೇತುದಾರರಾಗಿ ಹಲವು ಪರಿಣಾಮಕಾರಿ ತರಬೇತಿಗಳನ್ನು ಇವರು ನೀಡಿರುತ್ತಾರೆ.ಇವರ ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇವರಿಗೆ ಈಗಾಗಲೇ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಕಮಲ ಪತ್ರ ಪ್ರಶಸ್ತಿ, ವಲಯ ಮಟ್ಟದ ಕಲಾ ರತ್ನ ಪ್ರಶಸ್ತಿ ಹಾಗೂ ಹತ್ತು ಹಲವು ಸಂಘಸಂಸ್ಥೆಗಳಿಂದ ಗೌರವ ಸನ್ಮಾನಗಳನ್ನು ಪಡೆದಿರುತ್ತಾರೆ.







