ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ

0

ದೇಶಪ್ರೇಮ ಪ್ರತಿಯೊಬ್ಬರಲ್ಲೂ ಹೊರಹೊಮ್ಮಲಿ :ಜಿ.ಜೆ. ಮೆಹಂದಳೆ

“ಸ್ವಾತಂತ್ರ್ಯ ಹೋರಾಟಗಾರರು ನಮಗೆ ಸ್ಪೂರ್ತಿ ನೀಡುವವರು. ಎಲೆಮರೆಯ ಕಾಯಿಯಂತೆ ಇದ್ದ ಹೋರಾಟಗಾರರೆಲ್ಲರ ಪರಿಚಯವು ಮುಂದಿನ ಪೀಳಿಗೆಗೆ ದೊರಕಲಿ ಎಂಬ ಉದ್ದೇಶದೊಂದಿಗೆ ಭಾವಚಿತ್ರಗಳನ್ನು ಬಿಡಿಸಿ ಪ್ರದರ್ಶನ ಮಾಡುತ್ತಿದ್ದೇನೆ. ಇದು 1322ನೇ ಪ್ರದರ್ಶನವಾಗಿದ್ದು, 360 ಕ್ಕಿಂತಲೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಖಾದಿ ಬಟ್ಟೆಯಲ್ಲಿ ಅನಾವರಣಗೊಂಡಿದೆ. ಸುಂದರವಾದ ಪರಿಸರದ ಮಧ್ಯದಲ್ಲಿ ಕಂಗೊಳಿಸುತ್ತಿರುವ ಈ ಸ್ನೇಹ ಶಾಲೆಯಲ್ಲಿ ಈ ಚಿತ್ರ ಪ್ರದರ್ಶನವು ನಮಗೆ ಸಂತಸ ತಂದಿದೆ. ಇಂತಹ ಶಾಲೆ ವಿದ್ಯಾರ್ಥಿಗಳ ಬದುಕು ರೂಪಿಸಲು ಅತ್ಯಂತ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ದಾವಣಗೆರೆ ಸಮೀಪದ ಹರಿಹರದ ಚಿತ್ರ ಕಲಾವಿದ
ಶಿಕ್ಷಕ ಜಿ.ಜೆ. ಮೆಹಂದಳೆ ಹೇಳಿದರು.

ಅವರು ಸೆ.28ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಸ್ವಾರ್ಥವಿಲ್ಲದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು ಸ್ವಾತಂತ್ರ್ಯ ಹೋರಾಟಗಾರರು. ಹಲವು ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ಭಾವಚಿತ್ರವನ್ನು ನೋಡಿದಾಗ ನಮ್ಮಲ್ಲಿ ದೇಶಪ್ರೇಮ ಮೈತಳೆಯುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೆಹಂದಳೆ
ಯವರ ಧರ್ಮಪತ್ನಿ ಶಕುಂತಲಾ ಮತ್ತು ಕುಟುಂಬಸ್ಥರು ಉಪಸ್ಥಿರಿದ್ದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಸ್ವಾಗತಿಸಿ ಮುಖ್ಯ ಶಿಕ್ಷಕ ದೇವಿಪ್ರಸಾದ ಜಿ. ಸಿ ಯವರು ವಂದಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಸವಿತಾ ಎಂ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮವು ಜರಗಿತು.
ಗೀತ ಗಾಯನ ಕಾರ್ಯಕ್ರಮವನ್ನು 10ನೇ ತರಗತಿ ವಿದ್ಯಾರ್ಥಿ, ಅಪ್ರಮೇಯ ಆರ್ ಯು ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸಿತರಿದ್ದರು.