ಧರ್ಮಸ್ಥಳದಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಗಾಂಧಿಸ್ಮೃತಿ ಮತ್ತು ‌ಜನಜಾಗೃತಿ ಸಮಾವೇಶದ ಆಮಂತ್ರಣ ಪತ್ರ ನೀಡಿ ಸ್ವಾಗತಿಸಿದ ಸಂಘಟಕರು

0

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ-2 ಇದರ ನೇತೃತ್ವದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಗಾಂಧಿಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶದ ಪ್ರಥಮ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆಯವರಿಗೆ ನೀಡಿ ಸ್ವಾಗತಿಸಲಾಯಿತು.

ಜಿಲ್ಲಾಧ್ಯಕ್ಷರಾದ ವಿಶ್ವನಾಥ ರೈ ಕಳಂಜ ಮತ್ತು ಜಿಲ್ಲಾ ವೇದಿಕೆಯ ಸದಸ್ಯರು ಆಮಂತ್ರಣ ನೀಡಿ ಆಶೀರ್ವಾದವನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪುತ್ತೂರು, ಜಿಲ್ಲಾ ಕಾರ್ಯದರ್ಶಿ ಬಾಬು ನಾಯ್ಕ, ಸುಳ್ಯ ತಾಲೂಕು ವೇದಿಕೆ ಅಧ್ಯಕ್ಷ ವೆಂಕಪ್ಪ ಗೌಡ, ಕಡಬ ತಾಲೂಕು ವೇದಿಕೆ ಅಧ್ಯಕ್ಷ ಇಂದುಶೇಖರ ಶೆಟ್ಟಿ ನಿಕಟಪೂರ್ವ ಅಧ್ಯಕ್ಷ ಮಹೇಶ್ ಕುಮಾರ್ ಮತ್ತು ವೇದಿಕೆಯ ಸದಸ್ಯರು, ಸುಳ್ಯ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಸುಳ್ಯ ತಾಲೂಕಿನ ಜಿಲ್ಲಾ ವೇದಿಕೆಯ ಕೋ ಆಪ್ಟ್ ಸದಸ್ಯ ವಿಶ್ವನಾಥ ಗೌಡ ಕಲ್ಲಂಬಿ, ಬೂಡು ರಾಧಾಕೃಷ್ಣ ರೈ,ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ತಾಲೂಕು ವೇದಿಕೆಯ ಕೋ ಆಪ್ಟ್ ಸದಸ್ಯ ಸುಬ್ಬ ಪಾಟಲಿ,ಪದ್ಮನಾಭ ಜೈನ್,ಮಲ್ಲೇಶ್ ಬೆಟ್ಟಂಪಾಡಿ, ಮಾಧವ ಚಾಂತಾಳ ,ಸುಳ್ಯ ವಲಯಾಧ್ಯಕ್ಷ ಮನೋಹರ್. ಕೆ, ಗಿರೀಶ್ ಉಪಸ್ಥಿತರಿದ್ದರು.