ಬಿಗ್ 4 ಟೈಲ್ಸ್ ವತಿಯಿಂದ ಚಾಲಕ ಮಾಲಕರ ಸ್ನೇಹ ಸಮ್ಮಿಲನ ಕಾರ್ಯಕ್ರಮ

0

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಳಿ ಇರುವ ಸಹರಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಬಿಗ್ 4 ಟೈಲ್ಸ್ ವತಿಯಿಂದ ಪಾರ್ಕಿಂಗ್ ನಲ್ಲಿರುವ ಎಲ್ಲಾ ಟೆಂಪೋ,ಪಿಕಪ್, ಲಾರಿ ಹಾಗೂ ಜೀಪಿನ ಚಾಲಕ ಮಾಲಕರ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸೆ.29 ರಂದು ನಡೆಯಿತು.

ಟೈಲ್ಸ್ ನ ಬಗ್ಗೆ ಮಾಹಿತಿಯನ್ನು ಬಿಗ್ 4 ಟೈಲ್ಸ್ ನ ಮೆನೇಜರ್ ಅಜೀಜ್ ರವರು ವಿವರಿಸಿದರು. ಇಂಟೀರಿಯಲ್ ವರ್ಕ್ ನ ಬಗ್ಗೆ ಮೆನೇಜರ್ ಮನೋಜ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಲಕ ಇಬ್ರಾಹಿಂ ರ ಪುತ್ರ ಇಶ್ರಾಕ್ ಉಪಸ್ಥಿತರಿದ್ದರು. ನಂತರ ಹಗ್ಗಜಗ್ಗಾಟ, ಗಿಫ್ಟ್ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಿಬ್ಬಂದಿಗಳಾದ ರಾಜೇಶ್, ಜೀವಿತ್, ಇರ್ಫಾನ್, ಧನುಷ್ ಸಹಕರಿಸಿದರು.