ಸುಳ್ಯ ತಾಲೂಕು ನಾಗಪಟ್ಟಣ ಡಾಮರು ರಸ್ತೆಯ ಬದಿಯಲ್ಲಿದ್ದ ಎರಡು ಹೋರಿ ಕರುಗಳನ್ನು ಮಾರುತಿ 800 ಕಾರಿನಲ್ಲಿ 2023 ಜನವರಿ ತಿಂಗಳಲ್ಲಿ ಹಿಂಸಾತ್ಮಕವಾಗಿ ಸಾಗಾಣಿಕೆ ಮಾಡಿಕೊಂಡು ಅಲೆಟ್ಟಿ ರಸ್ತೆಯಲ್ಲಿ ಕೇರಳ ಕಸಾಯಿ ಖಾನೆಗೆ ಸಾಗಾಟ ಮಾಡುತ್ತಿರುವ ಆರೋಪದಲ್ಲಿ ಅಸ್ಕರ್ ಮತ್ತು ಉಸ್ಮಾನ್ ಎಂಬುವವರ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.














ಮಿತ್ತಡ್ಕ ಎಂಬಲ್ಲಿ ಒಂದನೇ ಆರೋಪಿಯಾದ ಅಸ್ಕರ್ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ತನ್ನ ಕಾರನ್ನು ಚಾಲನೆ ಮಾಡಿ ತನ್ನ ಚಾಲನಾ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿನ ವಿದ್ಯುತ್ ಕಂಬಕ್ಕೆ ಕಾರನ್ನು ಡಿಕ್ಕಿ ಪಡಿಸಿದ ಪರಿಣಾಮ ಆತನಿಗೆ ಸಣ್ಣ ಪುಟ್ಟ ಗಾಯಗೊಂಡಿದ್ದು ಆ ಸಮಯ ಸ್ಥಳೀಯರು ಅಲ್ಲಿಗೆ ಬಂದಾಗ ಕಾರಿನಲ್ಲಿದ್ದ ಮತ್ತೋರ್ವ ಆರೋಪಿ ಉಸ್ಮಾನ್ ಎಂಬಾತ ಪರಾರಿಯಾಗಿದ್ದ ಎಂದು ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಜಾನುವಾರು ಪ್ರತಿಬಂದಕ ಆದ್ಯಾದೇಶ ಕಾಯ್ದೆ 2020 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಸುಳ್ಯ ಪೊಲೀಸರು ಆರೋಪಿತರ ವಿರುದ್ಧ ಸುಳ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಳ್ಯ ಹಿರಿಯ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶೆಯವರಾದ ಶ್ರೀಮತಿ ಟಿ ದಮಯಂತಿ ಸೋಮಯ್ಯ ರವರು ಆರೋಪಿಗಳಾದ ಆಸ್ಕರ್ ಮತ್ತು ಉಸ್ಮಾನ್ ಎಂಬುವರ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತುಪಡಿಸುವಲ್ಲಿ ಅಭಿ ಯೋಜನೆಯು ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ದಿನಾಂಕ 25 .09 .2026 ರಂದು ಆರೋಪಿಗಳನ್ನು ಬಿಡುಗಡೆಗೊಳಿಸಿ ತೀರ್ಪು ನೀಡಿರುತ್ತಾರೆ.
ಆರೋಪಿಗಳ ಪರವಾಗಿ ಸುಳ್ಯದ ವಕೀಲರಾದ ಎಂ. ವೆಂಕಪ್ಪ ಗೌಡ ಚಂಪಾ.ವಿ ಗೌಡ ರಾಜೇಶ್ ಬಿ.ಜಿ,ಶ್ಯಾಮ್ ಪ್ರಸಾದ್ ಯನ್ .ಕೆ ಹಾಗೂ ವಿಮಲೇಶ್ ಗೌಡ ರವರು ವಾದಿಸಿದ್ದರು.







