ಮಡಪ್ಪಾಡಿ : ಸಂಜೀವಿನಿ ಒಕ್ಕೂಟದ ವತಿಯಿಂದ ಅಣಬೆ ಕೃಷಿ ತರಬೇತಿ

0

ಅಕ್ಷಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮಡಪ್ಪಾಡಿ ಮತ್ತು ವಿಜಯ ಗ್ರಾಮಿಣಾಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ ಸೆ. 28 ರಂದು ಮಡಪ್ಪಾಡಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಉಷಾ ಜಯರಾಮ್ ವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಜಾಲ್ಸುರು ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಎನ್ ಆರ್ ಎಲ್ ಎಂ, ಟಿಪಿಎಂ ಶ್ವೇತಾ, ಮಡಪ್ಪಾಡಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಭಾಗವಹಿಸಿ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ರಾಕೇಶ್ ಕುಡೆಕಲ್ಲು ಆಗಮಿಸಿ ಮಾಹಿತಿ ನೀಡಿ, ಅಣಬೆ ಕೃಷಿಯ ಮಹತ್ವ, ವಿವಿಧ ಜಾತಿಯ ಅಣಬೆಗಳ ಬಗ್ಗೆ ಬೀಜ ಬಿತ್ತನೆ ವಿಧಾನ, ಸ್ವಚ್ಛತೆ ಕಾಪಾಡಿಕೊಳ್ಳುವುದು, ಬೆಳೆಯ ನಿರ್ವಹಣೆ ಹಾಗೂ ಕೋಯ್ಲಿನ ವಿಧಾನಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ ಅಣಬೆ ಬಿತ್ತನೆ ಪ್ರಾತ್ಯಕ್ಷಿಕೆ ನಡೆಸಿದರು. ಸಂಜೀವಿನಿ ಒಕ್ಕೂಟದ ಕೃಷಿ ಸಖಿ ಪುಷ್ಪಲತಾ ನೂಜಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುಷ್ಪಾ ಪಿ.ಜಿ. ಪ್ರಾರ್ಥನೆ ಮಾಡಿದರು. ರೇವತಿ ಸ್ವಾಗತಿಸಿ, ಎಂಬಿಕೆ ಭಾನುಮತಿ ವಂದಿಸಿದರು. ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ತರಬೇತಿಯಲ್ಲಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು, ಎಲ್ ಸಿ ಆರ್ ಪಿಗಳು, ಸಿಆರ್ ಪಿಇಪಿ, ಕೃಷಿ ಸಖಿ ಮೋಹಿನಿ ವಿಶ್ವನಾಥ್ ಸೇರಿದಂತೆ 34 ಮಂದಿ ಹಾಜರಿದ್ದರು.