ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್

0

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು, ಸುಳ್ಯ ಇದರ ವತಿಯಿಂದ ಸೆ. 27ರಂದು ನಡೆಸಿದ Foxconn ಕಂಪೆನಿಯ ಸಂದರ್ಶನದಲ್ಲಿ 2026ನೇ ಸಾಲಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾದ ವಿಷ್ಣು ಎಂ.ಎ ಆಯ್ಕೆಯಾಗಿರುತ್ತಾರೆ. ಇವರಿಗೆ ಕಂಪೆನಿಯಿಂದ ರೂ. 3.5 ಲಕ್ಷ ವಾರ್ಷಿಕ ವೇತನ ಇದೆಯೆಂದು ಕಂಪೆನಿ ತಿಳಿಸಿದೆ ಮತ್ತು EXCELSOFT ಕಂಪೆನಿಯ ಸಂದರ್ಶನದಲ್ಲಿ 2026ನೇ ಸಾಲಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ & ಮೆಸಿನ್ ಲರ್ನಿಂಗ್) ವಿಭಾಗದ ವಿದ್ಯಾರ್ಥಿಯಾದ ಜಶ್ವಂತ್ ಜಿ.ಸಿ ಆಯ್ಕೆಯಾಗಿರುತ್ತಾರೆ. ಇವರಿಗೆ ಕಂಪೆನಿಯಿಂದ ರೂ. 3 ಲಕ್ಷ ವಾರ್ಷಿಕ ವೇತನ ಇದೆಯೆಂದು ಕಂಪೆನಿ ತಿಳಿಸಿದೆ.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ ‘ಬಿ’ ಇದರ ಅಧ್ಯಕ್ಷರಾಗಿರುವ ಡಾ. ರೇಣುಕಾಪ್ರಸಾದ್ ಕೆ.ವಿ., ಸೆಕ್ರೆಟರಿ, ಎ.ಪಿ.ಎಲ್.ಇ(ರಿ) ಕಮಿಟಿ ‘ಬಿ’ ಡಾ. ಜ್ಯೋತಿ ಆರ್. ಪ್ರಸಾದ್, ಡೈರೆಕ್ಟರ್ ಎ.ಪಿ.ಎಲ್.ಇ.(ರಿ) ಕಮಿಟಿ ‘ಬಿ’ ಡಾ. ಅಭಿಜ್ಞ ಕೆ.ಆರ್., ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಶ್ರೀ ಮೌರ್ಯ ಆರ್. ಕುರುಂಜಿ, ಪ್ರಾಂಶುಪಾಲ ಡಾ. ಸುರೇಶ ವಿ., ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ., ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಕುಸುಮಾಧರ ಎಸ್., ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಾಲಪ್ರದೀಪ್ ಕೆ.ಎನ್., ಟ್ರೈನಿಂಗ್ & ಪ್ಲೇಸ್‌ಮೆಂಟ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರಶಾಂತ್ ಕಕ್ಕಾಜೆ ಹಾಗೂ ಪ್ರಾಧ್ಯಾಪಕ ವೃಂದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.