













ಕರ್ನಾಟಕ ಸರ್ಕಾರದ ಆರೋಗ್ಯ ಕುಟುಂಬ ಕಲ್ಯಾಣ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಫರೀದ್ ರವರು ನಿನ್ನೆ ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ
ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ.ಎಂ.ಮುಸ್ತಫ ಭೇಟಿ ಮಾಡಿ
ಸುಳ್ಯ ನಗರ ರಾಜ್ಯದಲ್ಲಿಯೇ ಶೈಕ್ಷಣಿಕ ನಗರಿ ಎಂದು ಗುರುತಿಸಲಾಗಿದ್ದು, ದೇಶ ವಿದೇಶಗಳ ಸಾವಿರಾರು ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಸುಳ್ಯ ನಗರವು ಕೇರಳ ರಾಜ್ಯ, ಪ್ರವಾಸಿ ತಾಣವಾದ ಕೊಡಗು ಜಿಲ್ಲೆಗಳ ಗಡಿಪ್ರದೇಶವಾಗಿದೆ. ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದು ಬಿಗಡಾಯಿಸಲಿದೆ, ಇದಕ್ಕೆ ಪರಿಹಾರವಾಗಿ ರಾಜ್ಯ ಹೆದ್ದಾರಿಗಳನ್ನು, ಜಿಲ್ಲಾ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಮತ್ತು ನಗರ ವ್ಯಾಪ್ತಿಯಲ್ಲಿರುವ ಒಳರಸ್ತೆ ಗಳನ್ನು ರಿಂಗ್ ( ವರ್ತುಲ ) ರಸ್ತೆ ಗಳನ್ನಾಗಿ ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆ ಇರುತ್ತದೆ, ಅಲ್ಲದೇ ಕೆಲವು ವರ್ತುಲ ರಸ್ತೆಗಳನ್ನು ನಿರ್ಮಿಸಲು ಖಾಸಗಿಯವರು ಭೂಮಿ ಬಿಟ್ಟು ಕೊಡಲು ತಯಾರಿದ್ದು, ಅದನ್ನು ಸದುಪಯೋಗ ಪಡಿಸಿ ಕೊಳ್ಳಬೇಕಾಗಿದೆ. ಇದನ್ನು ಅಭಿವೃದ್ಧಿ ಪಡಿಸಲು ಅನುದಾನದ ಅವಶ್ಯಕತೆಯಿದ್ದು ನಗರೋತ್ಥಾನ ಯೋಜನೆಯಡಿ ರೂ.5 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಸಚಿವರಿಗೆ ಕೆ.ಎಂ.ಮುಸ್ತಫ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಎಂ.ವೆಂಕಪ್ಪ ಗೌಡ, ಎಸ್.ಸಂಶುದ್ದೀನ್, ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.







