ಗ್ಯಾರಂಟಿ ಸಮಿತಿ ಜಿಲ್ಲಾ ಸಮಿತಿ ಸದಸ್ಯರಾಗಿ ಪಿ.ಎಸ್.ಗಂಗಾಧರ್ ಮತ್ತು ಜಿ.ಕೃಷ್ಣಪ್ಪ ನೇಮಕ

0

.ಶಾಹುಲ್ ಹಮೀದ್ ಮತ್ತು ಸುಧೀರ್ ಕುಮಾರ್ ಶೆಟ್ಟಿಯವರ ಜಾಗಕ್ಕೆ ಬಂದ ಹಿರಿಯ ನಾಯಕರು

ಸುಳ್ಯದ ಹಿರಿಯ ಕಾಂಗ್ರೆಸ್ ಮುಂದಾಳು ಪಿ.ಎಸ್.ಗಂಗಾಧರ್ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಕಳೆದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ರವರು ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯರಾಗಿ ರಾಜ್ಯ ಸರಕಾರದಿಂದ ನೇಮಕಗೊಂಡಿದ್ದಾರೆ.
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಹಾಗೂ ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಯವರುಗಳ ಜಿಲ್ಲಾ ಸಮಿತಿ ಸದಸ್ಯತ್ವದ ಸ್ಥಾನಕ್ಕೆ ಈ ನೇಮಕಾತಿ ಆಗಿದ್ದು, ತಾಲೂಕು ಸಮಿತಿ ಪುನರ್ರಚನೆಯ ಸಂದರ್ಭ ಇವರುಗಳು ಆಯಾ ತಾಲೂಕುಗಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗುವರೆಂದು ಹೇಳಲಾಗಿದೆ.

ಶಾಹುಲ್ ಹಮೀದ್ ಅಧ್ಯಕ್ಷತೆಯ ಎರಡು ವರ್ಷಗಳ ಅವಧಿ ಮತ್ತು ಮುಂದುವರಿಸಲಾದ ಆರು ತಿಂಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ ಗ್ಯಾರಂಟಿ ಸಮಿತಿಗಳು ಪುನರ್ರಚನೆಗೊಳ್ಳಲಿದ್ದು, ಆ ಹಿನ್ನೆಲೆಯಲ್ಲಿ ಇವರ ನೇಮಕಾತಿ ಆಗಿದೆ.

ಪಿ.ಎಸ್.ಗಂಗಾಧರ್ ರವರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಭರತ್ ಮುಂಡೋಡಿ , ಎಂ.ವೆಂಕಪ್ಪ ಗೌಡ ಮತ್ತು ಪಿ.ಸಿ.ಜಯರಾಮ್ ರವರುಗಳು ಬ್ಲಾಕ್ ಅಧ್ಯಕ್ಷರುಗಳಾಗಿರುವ ಸಂದರ್ಭ ಕಾರ್ಯನಿರ್ವಹಿಸಿದ್ದುರು.
ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾಗಿರುವ ಇವರು ಉಬರಡ್ಕ ಸೊಸೈಟಿ ನಿರ್ದೇಶಕರಾಗಿ ಹಾಗೂ ಟಿ.ಎ.ಪಿ‌.ಸಿ.ಎಂ.ಎಸ್. ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.