ತಕ್ಷಣ ಮೇಲೆತ್ತಿದ ಜನರು
ಅಪಾಯದಿಂದ ಪಾರಾದ ಮಗು














ಸುಳ್ಯದ ಶ್ರೀರಾಮಪೇಟೆಯಲ್ಲಿ ಮುಳಿಯ ಜ್ಯುವೆಲ್ಲರ್ಸ್ ಎದುರುಗಡೆ ರಸ್ತೆ ಬದಿ ಜೆಸಿಬಿ ಮುಖಾಂತರ ಅಗೆದು ಕುಡಿಯುವ ನೀರಿನ ಪೈಪು ಕಾಮಗಾರಿ ನಡೆಯುತ್ತಿದ್ದು ಅಲ್ಲಿ ಚರಂಡಿ ಸ್ಲ್ಯಾಬ್ ತೆಗೆದಿರಿಸಿರುವಲ್ಲಿ , ನಡೆದುಕೊಂಡು ಬರುತ್ತಿದ್ದ ಮಗುವೊಂದು ಚರಂಡಿಗೆ ಬಿದ್ದ ಘಟನೆ ನಡೆದಿದೆ.
ತನ್ನ ಮನೆಯವರೊಂದಿಗೆ ನಡೆದುಕೊಂಡು ಬರುತ್ತಿದ್ದ ಮಗು ಕಾಮಗಾರಿ ನೋಡುತ್ತಾ ಮುಂದೆ ಬಂದು ಫುಟ್ ಪಾತ್ ಸ್ಲ್ಯಾಬ್ ತೆಗೆದಿರಿಸಿದ್ದ ಚರಂಡಿಯೊಳಗೆ ಬಿದ್ದು ಬಿಟ್ಟಿತು. ಅದನ್ನು ನೋಡಿದವರು ತಕ್ಷಣ ಓಡಿಬಂದಿ ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿದರು. ಮಗು ಅಪಾಯದಿಂದ ಪಾರಾಗಿದೆ.







