ಅ. 11-21: ಬಳ್ಪ ಶ್ರೀ ತ್ರಿಶೂಲಿನೀ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿಮಹಾನವರಾತ್ರೋತ್ಸವ

0

ಬಳ್ಪ ಶ್ರೀ ತ್ರಿಶೂಲಿನೀ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ
ಮಹಾನವರಾತ್ರೋತ್ಸವ ಅ. 11ರಿಂದ ಅ. 21ರ ತನಕ ಶ್ರೀ ಕ್ಷೇತ್ರದ ತಂತ್ರಿಗಳಾದ ಶ್ರೀ ಪಾವಂಜೆ ವಾಗೀಶ ಶಾಸ್ತ್ರಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀ ತ್ರಿಶೂಲಿನೀ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ 7.30ರಿಂದ‌ ಪಂಚಾಮೃತಾಭಿಷೇಕ, ಪ್ರಾತಃಕಾಲ ಪೂಜೆ, ಅಲಂಕಾರ ಪೂಜೆ, ಹೂವಿನ ಪೂಜೆ, ಹರಿವಾಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ 7.00ಕ್ಕೆ ನಿತ್ಯಪೂಜೆ, ಹೂವಿನಪೂಜೆ, ಹರಿವಾಣ ಪೂಜೆ, ರಂಗಪೂಜೆ, ಸಪ್ತಶತಿ ಪಾರಾಯಣ, ಲಲಿತಸಹಸ್ರನಾಮ ಪಾರಾಯಣ, ಭಜನಾಸೇವೆ ನಡೆಯಲಿದೆ.
ಅ. 14ರಂದು ಬೆಳಿಗ್ಗೆ ಕದಿರು ತುಂಬಿಸುವುದು, ನವಾನ್ನ ನಡೆಯಲಿದೆ. ಅ.15ರಂದು ಚಂಡಿಕಾಹೋಮ, ಅ.16ರಂದು ಸಂಜೆ ಶ್ರೀ ಶಾರದಾ ಪೂಜಾರಂಭಗೊಳ್ಳಲಿದೆ. ಅ.
17ರಂದು ಸಂಜೆ 6.30ಕ್ಕೆ ವಿದುಷಿ ಶ್ರೀಮತಿ ನಂದಿನಿ ಕೆ.ವಿ., ಕಲಾಸಂಗಮ ಮೈಸೂರು ಮತ್ತು ಬೆಂಗಳೂರು ಇವರ ಶಿಷ್ಯರಿಂದ ನೃತ್ಯ ಸೇವೆ ನಡೆಯಲಿದೆ. ಅ.18ರಂದು ಸಂಜೆ 6.30ಕ್ಕೆ ವಿದುಷಿ ಮಾನಸಿ ಪ್ರಸಾದ್ ಬೆಂಗಳೂರು ಇವರಿಂದ ಕರ್ಣಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಅ.20ರಂದು ಮಹಾನವಮಿ, ಬೆಳಿಗ್ಗೆ 11.00ಕ್ಕೆ ಆಯುಧ ಪೂಜೆ ನಡೆಯಲಿದೆ. ಅ. 21ರ ವಿಜಯದಶಮಿಯಂದು ಬೆಳಿಗ್ಗೆ 10.00ರಿಂದ ಶ್ರೀ ಮಹಾಗಣಪತಿಗೆ ಅಪ್ಪದ ಪೂಜೆ, ಶ್ರೀ ನಾಗದೇವರು, ದೈವಗಳಿಗೆ ತಂಬಿಲ ಮತ್ತು ರಕ್ತೇಶ್ವರೀ ಗುಳಿಗ ದೈವಗಳಿಗೆ ತಂಬಿಲ ನಡೆಯಲಿದೆ.
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರೋತ್ಸವ ಸಮಯದಲ್ಲಿ ಬೆಳಿಗ್ಗೆ 8.00ರಿಂದ ಬೆಳಗ್ಗಿನ ಪೂಜೆ, ಪಂಚಾಮೃತಾಭಿಷೇಕ,
ಹೂವಿನ ಪೂಜೆ, ಸಪ್ತಶತೀ ಪಾರಾಯಣ, ಮಧ್ಯಾಹ್ನ 1.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಅ. 21ರಂದು ವಿಜಯದಶಮಿ ಪ್ರಯುಕ್ತ ಮಧ್ಯಾಹ್ನ 11.00 ರಿಂದ ಅಕ್ಷರಾಭ್ಯಾಸ ರಾತ್ರಿ 8.30ಕ್ಕೆ ರಂಗಪೂಜೆ (ಸಾಮೂಹಿಕ), ಅ. 18ರಂದು ಸಂಜೆ 6.30ರಿಂದ ನೃತ್ಯಸೇವೆ ನಡೆಯಲಿದೆ.