













ಬೆಳ್ಳಾರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಪೆರುವಾಜೆಗುತ್ತು ಡಾ.ಗೋಪಿನಾಥ ಶೆಟ್ಟಿಯವರು ಸೆ.26 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠಸಮಾರಾಧನೆಯು ಅ.08 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾವಿನಯಚಂದ್ರರವರು ಮಾತನಾಡಿ ದಿ.ಡಾ.ಗೋಪಿನಾಥ ಶೆಟ್ಟಿಯವರು ವೈದ್ಯಕೀಯ ಸೇವೆ ನೀಡುತ್ತಿದ್ದ ಬಗ್ಗೆ ಹಾಗೂ ಅವರ ಆದರ್ಶಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ದಿ.ಡಾ.ಗೋಪಿನಾಥ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಪುತ್ರಿ ಶ್ರೀಮತಿ ಮಧುಮತಿ ರಾಧಾಕೃಷ್ಣ ಬೊಳ್ಳೂರು,ಅಳಿಯ ರಾಧಾಕೃಷ್ಣ ಬೊಳ್ಳೂರು,ಸೊಸೆ ಲಕ್ಷ್ಮೀ (ರಾಜೀವಿ) ಹಾಗೂ ಮೊಮ್ಮಕ್ಕಳು,ಕುಟುಂಬಸ್ಥರು ಉಪಸ್ಥಿತರಿದ್ದರು.







