













ಎಡಮಂಗಲ ಗ್ರಾಮದ ಪಟ್ಲದ ಮೂಲೆ ಶ್ರೀ ಆದಿಪರಾಶಕ್ತಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ ಅ.11ಕ್ಕೆ ಆರಂಭಗೊಂಡು ಅ.20ರವರೆಗೆ ನಡೆಯಲಿದೆ.
ಅ.11 ರಿಂದ ಅ.20ರವರೆಗೆ
ವರ್ಷಪ್ರತಿಯಂತೆ ವಿಶೇಷ ನವರಾತ್ರಿ ಪೂಜೆ ನಡೆಯಿದ್ದು,
ಪ್ರತಿ ದಿನ ಬೆಳಿಗ್ಗೆ ,ಮಧ್ಯಾಹ್ನ ಮಹಾಪೂಜೆ ರಾತ್ರಿ ವಿಶೇಷ ಮಹಾಪೂಜೆ ನಡೆಯಲಿದೆ.

ಅ.20 ರಂದು ಬೆಳಿಗ್ಗೆ ಮತ್ತು ಮಧ್ಯಾಹ್ನ ವಿಶೇಷ ಪೂಜೆ, ರಾತ್ರಿ 8:00 ಗಂಟೆಯಿಂದ 10 ಗಂಟೆಯವರೆಗೆ ಆಯುಧ ಪೂಜೆ, ವಾಹನ ಪೂಜೆ, ಶ್ರೀದೇವಿಗೆ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ. ವಿಶೇಷವಾಗಿ ಹೂವಿನಪೂಜೆ, ಮಹಾಪೂಜೆ, ಪಂಚಕಜ್ಜಾಯ, ಕುಂಕುಮಾರ್ಚನೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿಗಳಾದ ಮಾಯಿಲಪ್ಪ ಗೌಡ ಪಟ್ಲದಮೂಲೆ ತಿಳಿಸಿದ್ದಾರೆ.







