ಅರಂತೋಡು : ಕಾರುಗಳು ಪರಸ್ಪರ ಡಿಕ್ಕಿ

0

ಪ್ರಯಾಣಿಕರು ಅಪಾಯದಿಂದ ಪಾರು – ಕಾರು ಜಖಂ

ಅರಂತೋಡು ಸಮೀಪ ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಕಾರುಗಳು ಜಖಂ ಗೊಂಡಿರುವ ಘಟನೆ ಅ 9 ರಂದು ನಡೆದಿದೆ.

ಸುಳ್ಯ ದ ಕಾರು ಸುಳ್ಯದಿಂದ ಅರಂತೋಡು ಕಡೆಗೆ ಹೋಗುತ್ತಿದ್ದಾಗ ಮಡಿಕೇರಿ ಕಡೆಯಿಂದ ಬಂದ ಕೇರಳ ರಿಜಿಸ್ಟರ್ ನಂಬರ್ ಹೊಂದಿರುವ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಎರಡು ಕಾರುಗಳು ಜಖಂ ಗೊಂಡಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.