













ಸುಳ್ಯ ನಾವೂರು ಕಾಲೊನಿಯಲ್ಲಿ ಮುತ್ತು ಎಂಬವರ ಪುತ್ರಿ ಚಾಂದಿನಿ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಮಧ್ಯಾಹ್ನದ ವೇಳೆಗೆ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೆ ತಾಯಿ ಮನೆಗೆ ಬಂದಾಗ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡಿರುವುದು ಗೊತ್ತಾಯಿತು. ಬಳಿಕ ಕಿಟಕಿಯಿಂದ ನೋಡಿದಾಗ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂತು. ಇದೀಗ ಸ್ಥಳಕ್ಕೆ ಪೋಲೀಸರು, ಕಂದಾಯ ಇಲಾಖೆಯವರು ಸ್ಥಳಕ್ಕೆ ಬಂದು ಮಹಜರು ನಡೆಸುತ್ತಿದ್ದಾರೆ.







