ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭ

0

ಇಂದು ರಾತ್ರಿ ಕ್ಷೇತ್ರದ ರಂಗಪೂಜೆ ಮತ್ತು ಭಕ್ತಾದಿಗಳ ಸಾಮೂಹಿಕ ರಂಗಪೂಜೆ

ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ.10 ರಂದು ಬೆಳಿಗ್ಗೆ ಪ್ರಾರಂಭಗೊಂಡಿದ್ದು ಅ.20 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ.10 ರಂದು ಬೆಳಿಗ್ಗೆ ಗಣಪತಿ ಹೋಮ ನಡೆಯಿತು.
ರಾತ್ರಿ ಗಂಟೆ 8.00 ಕ್ಕೆ ಶ್ರೀ ಕ್ಷೇತ್ರದ ರಂಗಪೂಜೆ ನಡೆಯಲಿದೆ.
ಬಳಿಕ ಭಕ್ತಾದಿಗಳ ಸಾಮೂಹಿಕ ರಂಗಪೂಜೆ ನಡೆಯಲಿದೆ.ರಾತ್ರಿ ಗಂಟೆ 10.00 ಕ್ಕೆ ಮಹಾಪೂಜೆ ನಡೆಯಲಿದೆ.ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.


ಪ್ರತೀ ದಿನ ಬೆಳಿಗ್ಗೆ ಗಂಟೆ 7.30 ಮಧ್ಯಾಹ್ನ 12.30 ರಾತ್ರಿ ಗಂಟೆ 7.30 ಕ್ಕೆ (ಶುಕ್ರವಾರ ರಾತ್ರಿ 8.30) ಶ್ರೀ ದೇವರಿಗೆ ಪೂಜೆ ನಡೆಯಲಿದೆ.
ಪ್ರತೀ ದಿನ ದೇವಸ್ಥಾನದಲ್ಲಿ ಬೆಳಿಗ್ಗೆ ಗಂಟೆ 11.00 ರಿಂದ ಮತ್ತು ಸಂಜೆ ಗಂಟೆ 6.00 ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.21ರಂದು ಬುಧವಾರ ಪೂರ್ವಾಹ್ನ ಗಂಟೆ 8.00 ರಿಂದ ಅಕ್ಷರಾಭ್ಯಾಸ ನಡೆಯಲಿದೆ‌.
ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ರೈ ಪೆರುವಾಜೆಗುತ್ತು ತಿಳಿಸಿದ್ದಾರೆ.