ಅ.11 ರಂದು ಗುತ್ತಿಗಾರಿನಲ್ಲಿ 25 ನೇ ಶಾಖೆ ಉದ್ಘಾಟನೆ














ಸುಳ್ಯದ ಗೌಡರ ಯುವಸೇವಾ ಸಂಘದಿಂದ ಪ್ರವರ್ತಿತಗೊಂಡು ೧೯೯೭-೯೮ ರಲ್ಲಿ ಆರಂಭಗೊಂಡ ಶ್ರೀ ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ೨೯ ನೇ ವರ್ಷದ ಹರೆಯದಲ್ಲಿ ೨೫ ನೇ ಶಾಖೆಯನ್ನು ತೆರೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಆರ್ಥಿಕ ಕ್ಷೇತ್ರದಲ್ಲಿ ಬಲಾಢ್ಯ ಹೆಜ್ಜೆಯನ್ನು ಊರಿದೆ.ವೆಂಕಟರಮಣ ಸೊಸೈಟಿಯ ಕಾರ್ಯವ್ಯಾಪ್ತಿಯು ಕರ್ನಾಟಕ ರಾಜ್ಯಮಟ್ಟದ್ದಾಗಿದೆ. ಗೌಡರ ಯುವ ಸೇವಾ ಸಂಘ ಸುಳ್ಯ ಇದರ ಸ್ಥಾಪಕಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಸ್ಥಾಪಕ ಕಾರ್ಯದರ್ಶಿಎ.ವಿ.ತೀರ್ಥರಾಮ ಹಾಗೂ ಸ್ಥಾಪಕ ಕೋಶಾಧಿಕಾರಿ ಪಿ.ಸಿ.ಜಯರಾಮ ಮತ್ತು ೩೫ ಮಂದಿ ನಿರ್ದೇಶಕರ ದೂರದೃಷ್ಟಿಯ ಫಲವಾಗಿ ಈ ಸಹಕಾರಿ ಸಂಸ್ಥೆ ಜನ್ಮ ತಾಳಿ ಸಂಸ್ಥೆ ಇಂದು ವಿಸ್ತಾರವಾಗಿ ಬೆಳೆದಿದೆ. ನೂರಾರು ಮಂದಿಗೆ ಉದ್ಯೋಗ ನೀಡಿದೆ.ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಪಿ.ಸಿ.ಜಯರಾಮ ಹಾಗೂ ಉಪಾಧ್ಯಕ್ಷರಾಗಿ ಯಂ.ಬೋಜಪ್ಪ ಗೌಡ ಮತ್ತು ೧೩ ಜನ ನಿರ್ದೇಶಕರುಗಳು ಈ ಸಂಸ್ಥೆಗೆ ಭದ್ರ ಬುನಾದಿ ಹಾಕಿದ್ದು ತದನಂತರ ಜಾಕೆ ಸದಾನಂದ ಅಧ್ಯಕ್ಷರಾಗಿ ಹಾಗೂ ಕೆ.ಸಿ.ನಾರಾಯಣ ಗೌಡ ಉಪಾಧ್ಯಕ್ಷರಾಗಿ, ಅನಂತರ ನಿತ್ಯಾನಂದ ಮುಂಡೋಡಿ ಅಧ್ಯಕ್ಷರಾಗಿ, ಚಂದ್ರಾ ಕೋಲ್ಚಾರ್ ಉಪಾಧ್ಯಕ್ಷರಾಗಿ, ಮುಂದೆ ಕ್ರಮವಾಗಿ ಎ.ವಿ.ತೀರ್ಥರಾಮ, ಚಂದ್ರಾ ಕೋಲ್ಚಾರ್, ಕೆ.ಸಿ.ನಾರಾಯಣ ಗೌಡ, ಪಿ.ಸಿ.ಜಯರಾಮರವರು ಅಧ್ಯಕ್ಷರುಗಳಾಗಿ ಮತ್ತು ಕೆ.ಸಿ.ಸದಾನಂದ ಕುರುಂಜಿ ಮತ್ತು ಪಿ.ಯಸ್.ಗಂಗಾಧರರವರು, ಮೋಹನ್ ರಾಂ ಸುಳ್ಳಿ ಉಪಾಧ್ಯಕ್ಷರುಗಳಾಗಿ ಈ ಸಂಸ್ಥೆಗೆ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಕೆ.ಸಿ.ಸದಾನಂದ ಅಧ್ಯಕ್ಷರಾಗಿ, ದಿನೇಶ್ ಮಡಪ್ಪಾಡಿ ಉಪಾಧ್ಯಕ್ಷರಾಗಿ ಒಟ್ಟು ೧೭ ಜನ ನಿರ್ದೇಶಕರು ಮತ್ತು ಒಬ್ಬ ವೃತ್ತಿಪರ ನಿರ್ದೇಶಕರು ಈ ಸಂಸ್ಥೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಸಂಘದ ಪ್ರಧಾನ ಕಛೇರಿಗೆ ೦.೩೫.೭೫ ಎಕ್ರೆ ಸ್ವಂತ ನಿವೇಶನ ಇದ್ದು, ಇದರಲ್ಲಿ ರೂ. ೨.೫೦ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣವನ್ನು ಒಳಗೊಂಡ ಕಚೇರಿಯನ್ನು ನಿರ್ಮಿಸಿರುತ್ತೇವೆ. ಸುಳ್ಯ ಪ್ರಧಾನ ಕಚೇರಿ ಮತ್ತು ಸಂಘದ ಎಲ್ಲಾ ಶಾಖೆಗಳಲ್ಲಿ ವ್ಯವಹಾರವನ್ನು ಕಂಪ್ಯೂಟರ್ ಮೂಲಕವೇ ನಡೆಸುತ್ತ್ತಿದೆ. ಜನರಲ್ಲಿ ಉಳಿತಾಯ ಮನೋಭಾವನೆಯನ್ನು ಬೆಳೆಸುವುದು, ಕೃಷಿಕರು, ವ್ಯಾಪಾರಸ್ತರಿಗೆ ಸಾಲ-ಸೌಲಭ್ಯವನ್ನು ಒದಗಿಸುವುದು ಮತ್ತು ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ನೆರವನ್ನು ನೀಡುವ ಮಹತ್ತರವಾದ ಉದ್ಧೇಶವನ್ನು ಈ ಸಂಸ್ಥೆಯು ಹೊಂದಿದೆ.ಸಂಘದ ಪ್ರಧಾನ ಕಛೇರಿ ಸುಳ್ಯದಲ್ಲಿದ್ದು, ಸುಳ್ಯ, ಬೆಳ್ತಂಗಡಿ, ಪುತ್ತೂರು, ವಿಟ್ಲ, ಕಡಬ, ಮಂಗಳೂರು, ಬಿ.ಸಿ.ರೋಡ್, ಮಡಿಕೇರಿ, ಮೈಸೂರು, ಸಕಲೇಶಪುರ, ಕುಶಾಲನಗರ, ನಿಂತಿಕಲ್ಲು, ನೆಲ್ಯಾಡಿ, ಉಪ್ಪಿನಂಗಡಿ, ಕೊಕ್ಕಡ, ಸುಬ್ರಹ್ಮಣ್ಯ, ಮಡಂತ್ಯಾರು, ನಾಪೊಕ್ಲು, ಸೋಮವಾರಪೇಟೆ, ಕಕ್ಕೆಪದವು, ವೇಣೂರು, ಸೋಮಂತಡ್ಕ, ಆಲಂಕಾರು, ಮೂರ್ನಾಡುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿ ವ್ಯವಹಾರ ನಡೆಸಲಾಗುತ್ತಿದೆ. ಅ.೧೧ರಂದು ಗುತ್ತಿಗಾರಿನಲ್ಲಿ ನೂತನ ಶಾಖೆ ಆರಂಭಗೊಳ್ಳಲಿದೆ.ಗುತ್ತಿಗಾರು ಶಾಖೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಓಡಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸೊಸೈಟಿ ಅಧ್ಯಕ್ಷ ಕೆ.ಸಿ. ಸದಾನಂದ ಸಭಾಧ್ಯಕ್ಷತೆ ವಹಿಸಲಿದ್ದು, ಭದ್ರತಾ ಕೊಠಡಿಯನ್ನು ಕರಷಿಕರಾದ ದೇವಸ್ಯ ಮೋಹನ್ ಗೌಡ ನೆರವೇರಿಸಲಿದ್ದಾರೆ. ಗಣಕೀರಣ ಉದ್ಘಾಟನೆಯನ್ನು ಮಾಜಿ ಜಿ.ಪಂ. ಅಧ್ಯಕ್ಷ ವೆಂಕಟ್ ದಂಬೆಕೋಡಿ ನೆರವೇರಿಸಲಿದ್ದಾರೆ. ಪ್ರಥಮ ಪಾಲು ಪತ್ರವನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಪ್ರಥಮ ಪಾಲು ಪತ್ರ ವಿಇತರಣೆ ಮಾಡಲಿದ್ದಾರೆ. ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಗುತ್ತಿಗಾರು ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರೆ ನೆರವೇರಿಸಲಿದ್ದಾರೆ. ಪ್ರಥಮ ಸಾಲ ಪತ್ರ ವಿತರಣೆಯನ್ನು ಗುತ್ತಿಗಾರು ಮಾಜಿ ಮಂಡಲ ಪ್ರಧಾನ ಮುಳಿಯ ತಿಮ್ಮಪ್ಪಯ್ಯ ನೆರವೇರಿಸಲಿದ್ದಾರೆ. ಪ್ರಥಮ ಠೇವಣಿ ಪತ್ರ ವಿತರಣೆಯನ್ನು ಕೃಷಿಕರಾದ ಕೆ.ವಿ. ಸುಧೀರ್ ಕೂಜುಗೋಡು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕ್ರೈಸ್ತ ಅಲ್ಪ ಸಂಖ್ಯಾತರ ಸೊಸಯಟಿ ಉಪಾಧ್ಯಕ್ಷ ಲಿಜೋ ಜೋಸ್, ಗುತ್ತಿಗಾರು ಮಹಾಲಕ್ಷ್ಮಿ ಕಾಂಪ್ಲೆಕ್ಸ್ ಮಾಲಕ ನವೀನ್ ಬಾಳುಗೋಡು, ದೇವಿ ಸಿಟಿ ಕಾಂಪ್ಲೆಕ್ಸ್ ಮಾಲಕ ದೇವಿಪ್ರಸಾದ್ ಚಿಕ್ಮುಳಿ ಭಾಗವಹಿಸಲಿದ್ದಾರೆ.







