ಸಂಪನ್ಮೂಲ ವ್ಯಕ್ತಿಗಳಿಂದ ನಡೆದ ವಿಚಾರ ಗೋಷ್ಠಿಗಳು, ಮಾತೃ ಸಂಗಮ ಮಾಲಿಕೆ,
ಮಕ್ಕಳಿಂದ ನೃತ್ಯ ಪ್ರದರ್ಶನ
ರಂಗ ಮಯೂರಿ ಕಲಾ ಶಾಲೆ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಸಂಕಲ್ಪ ಮಕ್ಕಳ ಹಬ್ಬದ ಉದ್ಘಾಟನೆಯು ಅಮರಶ್ರೀಭಾಗ್ನ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಅ.9 ರಂದು ನೆರವೇರಿತು.















ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುದ್ದಿ ಮಾಧ್ಯಮ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಯು.ಪಿ. ಶಿವಾನಂದ ರವರು ವಹಿಸಿದ್ದರು.
‘ಗ್ರೀನ್ ಹೀರೋ ಆಫ್ ಇಂಡಿಯಾ’ ಡಾ. ಆರ್.ಕೆ. ನಾಯರ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಗಿಡಕ್ಕೆ ಮಣ್ಣು ಮತ್ತು ನೀರೆರೆದು ಸಂಕಲ್ಪ ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’, ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುಸ್ತಾಫ ಕೆ.ಎಂ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸಂತ ಬ್ರಿಜಿಡ್ ಚರ್ಚ್ ಉದರ ಧರ್ಮಗುರುಗಳಾದ
ಫಾ. ಒಲ್ವಿನ್ ಡಿ ಕುನ್ಹ,ಹಿರಿಯ ಉದ್ಯಮಿ ಕೃಷ್ಣ ಕಾಮತ್, ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ ಎಸ್ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಎಸ್ ಹರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿ ಶ್ರೀಮತಿ ಶೈಲಜಾ, ವಿದ್ಯಾರ್ಥಿ ನಾಯಕ ಶುಶಾಂಕ್ ಕೆ.ಜೆ, ವಿದ್ಯಾರ್ಥಿ ನಾಯಕಿ ಪ್ರಾಪ್ತಿ ಆಲಂಕಲ್ಯ ಉಪಸ್ಥಿತರಿದ್ದರು.

ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಅಧ್ಯಕ್ಷ ಜಿ.ಆರ್. ಪ್ರಸಾದ್ ಸ್ವಾಗತಿಸಿ, ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಪ್ರಾಸ್ತವಿಕ ಮಾತನಾಡಿದರು.
ಶಶಿಕಾಂತ್ ಮಿತ್ತೂರು ಮತ್ತು ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಗೋಷ್ಠಿಗಳು:
ಅ.9ರಂದು ಬೆಳಗ್ಗೆ ಪರಿಸರ ಜಾಗೃತಿಮತ್ತುನಿರ್ವಹಣೆಯ ವಿಷಯದ ಕುರಿತು ವಿಚಾರ ಗೋಷ್ಠಿ:
ಪರಿಸರ ತಜ್ಞರಾದ ಭಜನ್ ಬೋಪಣ್ಣ ರವರು ಪರಿಸರ ನಿರ್ವಹಣೆ ಕುರಿತು ವಿಷಯಮಂಡಿಸಲಾಯಿತು. ಕ.ಸಾ.ಪ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಸಂತೋಷ್ ಜಾಕೆ, ಜೇಸಿಐ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಉಪಸ್ಥಿತರಿದ್ದರು.
ಮಕ್ಕಳ ಸಾಮಾಜಿಕ ಜವಬ್ದಾರಿ ಹಾಗೂ ಮಾಧ್ಯಮಗಳ ಬಳಕೆ ವಿಷಯದ ಕುರಿತು ಸುಳ್ಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಕುಕ್ಕುಜಡ್ಕ ವಿಚಾರ ಮಂಡಿಸಿದರು. ಸ.ಪ.ಪೂ.ಕಾಲೇಜಿನ ಉಪಪ್ರಾಂಶುಶಪಾಲರಾದ ಪ್ರಕಾಶ್ ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಪ್ ಜಟ್ಟಿಪಳ್ಳ, ಕೆ.ವಿ.ಜಿ.ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಉಷಾ ಸಿ.ಶೆಟ್ಟಿ ಉಪಸ್ಥಿತರಿದ್ದರು.
ಬಳಿಕ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಪ್ರಸ್ತುತಿಯಲ್ಲಿ ಅರೆಭಾಷೆ ಹಾಡುಗಳಿಗೆ ಮಕ್ಕಳಿಂದ ನೃತ್ಯ ಸ್ಪರ್ಧೆ ನಡೆಯಿತು.
ಸಂಜೆ ಪೋಷಕರಿಗಾಗಿ ವಿನೂತನ ಕಾರ್ಯಗಾರ ‘ಮಾತೃ ಸಂಗಮ ಮಾಲಿಕೆ’ಯಡಿ ‘ವ್ಯಸ್ಥ ಜೀವನ–ಸ್ವಸ್ಥ ಭೋಜನ’ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು.
ಆರೋಗ್ಯಕರ ಆಹಾರ ಹಾಗೂ ತಿಂಡಿಗಳ ತಯಾರಿ ಬಗ್ಗೆ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ಪ್ರಸ್ತುತ ಪಡಿಸಿದರು. ಕೇಶವಕೃಪಾದ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ, ಸಂಜೀವಿನಿ ಒಕ್ಕೂಟದ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ ರವರು ಉಪಸ್ಥಿತರಿದ್ದರು.
ಗೋಷ್ಠಿಗಳ ಕಾರ್ಯಕ್ರಮ ನಿರ್ವಹಣೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಿರ್ವಹಣೆ ಮಾಡಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಶ್ರೀಮತಿ ಇಂದುಮತಿ ಯವರ ನಟರಾಜ ನೃತ್ಯ ನಿಕೇತನ ತಂಡದ ಸದಸ್ಯರಿಂದ ನೃತ್ಯ ರೂಪಕ ಹಾಗೂ ವಸಂತ ಆಚಾರ್ಯ ಕಾಯರ್ತೋಡಿ ಯವರ ನಿರ್ದೇಶನದ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ತಂಡದ ಈಶ್ವರಮಂಗಲ, ಕಡಬ, ಸುಳ್ಯದ ವಿದ್ಯಾರ್ಥಿಗಳಿಂದ ಡಾನ್ಸ್ ಕಾರ್ಯಕ್ರಮ ಪ್ರದರ್ಶನಗೊಂಡಿತು.
ರಂಗಮಯೂರಿ ಕಲಾ ಶಾಲೆ, ಪ್ರಣವ ಸೊಸೈಟಿ, ಸುದ್ದಿ ಸಮೂಹ ಸಂಸ್ಥೆಯವರು ಸಹಕರಿಸಿದರು. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ಭಾಗವಹಿಸಿದರು.







