













ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ದೇವಳದಲ್ಲಿ 2017ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕ್ಷೇತ್ರದ ಸಾನಿಧ್ಯ ವೃದ್ದಿಗಾಗಿ ಎಲ್ಲಾ ರೀತಿಯ ಪರಿಹಾರ ಪ್ರಾಯಶ್ಚಿತ ಹೋಮ ಯಾಗಾದಿಗಳನ್ನು ಪೂರೈಸಿ ಪ್ರಶ್ನೆ ಚಿಂತನೆಯ ಮಾರ್ಗದರ್ಶನದಂತೆ ಜೀರ್ಣೋದ್ಧಾರ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ಜರುಗಿದ್ದು, ಈ ಕಾರ್ಯದಲ್ಲಿ ಸೀಮೆಗೆ ಸಂಬಂಧಪಟ್ಟ ಎಲ್ಲಾ ಧಾರ್ಮಿಕ ಕ್ಷೇತ್ರಗಳು, ಭಜನಾ ಮಂಡಳಿಗಳು, ಮನೆತನದವರು, ಊರಪರವೂರ ದಾನಿಗಳು ಸಕ್ರೀಯವಾಗಿ ಪಾಲ್ಗೊಂಡಿದ್ದು, ಶ್ರೀ ಮಲ್ಲಿಕಾರ್ಜುನ ದೇವರ ಹಾಗೂ ಸಪರಿವಾರ ದೈವಿಕ ಶಕ್ತಿಗಳ ಕೃಪೆಗೆ ಪಾತ್ರರಾಗಿರುತ್ತಾರೆ. ಶ್ರೀ ಕ್ಷೇತ್ರದ ಮತ್ತು ಭಕ್ತರ ಅವಿನಾಭಾವ ಸಂಬಂಧ, ಮತ್ತು ಕ್ಷೇತ್ರದ ನಿತ್ಯನೈಮತ್ತಿಕಗಳಲ್ಲಿ ಸೀಮೆಯ ಭಕ್ತರ ಪಾಲ್ಗೊಳ್ಳುವಿಕೆಯ ಸತ್ಸಂಪ್ರದಾಯವನ್ನು ಮುಂದುವರಿಸುವ ದೃಷ್ಟಿಯಿಂದ ಶ್ರೀ ದೇವಳದ ಸಭಾಂಗಣದಲ್ಲಿ ನಾಳೆ ಅ. 11 ರವಿವಾರದಂದು ಪೂರ್ವಾಹ್ನ 11 ಗಂಟೆಗೆ ವಿಶೇಷ ಸಭೆಯನ್ನು ಕರೆಯಲಾಗಿದೆ.
ಈ ಸಭೆಗೆ ತಾವುಗಳೆಲ್ಲರೂ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನಿತ್ತು ಸಹಕರಿಸುವಂತೆ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.







