ಅರಂತೋಡು ಗ್ರಾಮದ ಕಿರ್ಲಾಯ – ಪೂಜಾರಿ ಮನೆ – ಉಕ್ರಾಜೆ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ

0

ಅರಂತೋಡು ಗ್ರಾಮದ ಜನರ ಬಹು ಬೇಡಿಕೆಯ ಕಿರ್ಲಾಯ-ಪೂಜಾರಿ ಮನೆ-ಉಕ್ರಾಜೆ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ನೂತನ ಕಾಂಕ್ರೀಟ್ ರಸ್ತೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರ ಶಾಸಕರು ಕು. ಭಾಗೀರಥಿ ಮುರುಳ್ಯ ಅವರು ಅ. 10 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ ಉಳುವಾರು , ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯ್ಕ, ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಕೇಶವ ಅಡ್ತಲೆ, ಅರಂತೋಡು – ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ , ಉಪಾಧ್ಯಕ್ಷರಾದ ಡಾ. ಲಕ್ಷ್ಮೀಶ್ , ದಯಾನಂದ ಕುರುಂಜಿ, ಭಜನಾ ಪರಿಷತ್ತಿನ ಅಧ್ಯಕ್ಷರಾದ ಸೋಮಶೇಖರ್ ಪೈಕ ಶಕ್ತಿ ಕೇಂದ್ರದ ಪ್ರಮುಖ ಲೋಹಿತ್‌ ಕಲ್ಲುಗದ್ದೆ, ಬೂತ್ ಅಧ್ಯಕ್ಷರಾದ ಮೋಹನ್‌ ಪಾರೆ ಮಜಲು, ಕಿಶೋ‌ರ್ ಮಾಸ್ಟರ್, ಅತಿ ಶೀಘ್ರವಾಗಿ ಕೆಲಸವನ್ನು ಮಾಡಿದ ಗುತ್ತಿಗೆದಾರರಾದ ಮಹೇಶ್ ಕುತ್ತಮೊಟ್ಟೆ ಹರಿಕಲ್ಲುಗದ್ದೆ, ಗ್ರಾಮದ ಪ್ರಮುಖರು, ಭಾಜಪದ ಕಾರ್ಯಕರ್ತರು, ಹಿರಿಯರು, ಗ್ರಾಮಸ್ಥರು , ಫಲಾನುಭವಿಗಳು ಉಪಸ್ಥಿತರಿದ್ದರು .