ಅ.12: ಹಳೆಗೇಟು ಬಳಿ ಪಯಸ್ವಿನಿ ಬಜಾರ್ ಶುಭಾರಂಭ

0

ಎಲೆಕ್ಟ್ರಾನಿಕ್ಸ್ ಉಪಕರಣಗಳ ಬೃಹತ್ ಶೋರೂಮ್

ಸುಳ್ಯದ ಹಳೆಗೇಟಿನ ಅಡ್ಕ ರಸ್ತೆಯಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳ ಎಲ್ಲಾ ತರಹದ ಎಲೆಕ್ಟ್ರಾನಿಕ್ಸ್ ಐಟಮ್ಸ್ ಗಳ ಬೃಹತ್ ಮಳಿಗೆ ‘ಪಯಸ್ವಿನಿ ಬಜಾರ್’ ಅ 12 ರಂದು ಬೆಳಿಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ.

ನೂತನ ಸಂಸ್ಥೆಯ ಉದ್ಘಾಟನಾ ಸಮಾರಂಭಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಕು. ಭಾಗೀರಥಿ ಮುರುಳ್ಯ,ಮಾಜಿ ಸಚಿವರಾದ ಎಸ್ ಅಂಗಾರ, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್, ಸುಳ್ಯ ನಗರ ಸೂಡ ಅಧ್ಯಕ್ಷರಾದ ಕೆ ಎಂ ಮುಸ್ತಫ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಎನ್ ಎ ರಾಮಚಂದ್ರ, ಎಂ ವೆಂಕಪ್ಪಗೌಡ, ಎಸ್ ಸಂಶುದ್ದೀನ್ ಅರಂಬೂರು ಸೇರಿದಂತೆ ವಿವಿಧ ರಾಜಕೀಯ ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ.
ನೂತನವಾಗಿ ಶುಭಾರಂಭಗೊಳ್ಳಲಿರುವ ಸಂಸ್ಥೆಯಲ್ಲಿ ಪ್ರತಿಷ್ಠಿತ ಎಲ್ಲಾ ಕಂಪನಿಗಳ ಎಲೆಕ್ಟ್ರಾನಿಕ್ ಐಟಂಗಳು ಮತ್ತು ಗೃಹ ಉಪಯೋಗಿ ಸಾಮಾಗ್ರಿಗಳು ಲಭ್ಯವಿದ್ದು ಅದರ ಎಂ ಆರ್ ಪಿ ದರ ದಿಂದ ಶೇಕಡ 50ರಷ್ಟು ರಿಯಾಯಿತಿ ದರದಲ್ಲಿ ಸದಾ ಗ್ರಾಹಕರಿಗೆ ನೀಡಲಿದ್ದೇವೆ ಎಂದು ಮಾಲಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಅಲ್ಲದೆ ಶುಭಾರಂಭದ ಅಂಗವಾಗಿ ಶುಭಾರಂಭದ ದಿನದಂದು ಲಕ್ಕಿ ಕೂಪನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಅದೇ ವಿಜೇತರಿಗೆ ಬಹುಮಾನವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.