ಈಶ್ವರಮಂಗಲದಲ್ಲಿ ಪಿಕಪ್ ವಾಹನ ಮತ್ತು ಬೈಕ್‌ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಕೊಡಿಯಾಲದ ಸುದೇಶ್ ಮೃತ್ಯು

0

ಈಶ್ವರಮಂಗಲದಲ್ಲಿ ಪಿಕ್‌ಅಪ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೊಡಿಯಾಲ ಗ್ರಾಮದ ಬೇರಿಯ ನಿವಾಸಿ ಸುದೇಶ್ (21) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕೊಡಿಯಾಲ ಗ್ರಾಮದ ಬೇರಿಯ ನಿವಾಸಿಗಳಾದ ಪೊಡಿಯ ಮತ್ತು ವಿಮಲ ದಂಪತಿಯ ಪುತ್ರ ಸುದೇಶ್ ಅವರು ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈಶ್ವರಮಂಗಲದಲ್ಲಿ ಪಿಕ್‌ಅಪ್ ವಾಹನ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಸುದೇಶ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅ.10 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.