ಪುತ್ಯ ಪೆರಾಜೆ : ಸೂರ್ಯ ಸ್ವಸಹಾಯ ಸಂಘದ ವತಿಯಿಂದ ಗ್ರಾಮಕ್ಕಾಗಿ ಒಂದು ದಿನ ಅಭಿಯಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಸೂರ್ಯ ಸ್ವಸಹಾಯ ಸಂಘ ಪುತ್ಯಪೆರಾಜೆಯ ಸದಸ್ಯರು ಗ್ರಾಮಕ್ಕಾಗಿ ಒಂದು ದಿನ ಅಭಿಯಾನದಲ್ಲಿ ಅನ್ನಪೂರ್ಣೇಶ್ವರಿ ಭಜನಾ ಮಂದಿರ ಪುತ್ಯದಿಂದ ಪೆರಾಜೆಯ ಪಯಸ್ವಿನಿ ಸೇತುವೆ ತನಕ ರಸ್ತೆ ಬದಿಯ ಸ್ವಚ್ಛತಾ ಕಾರ್ಯವನ್ನು ಗ್ರಾಮ ಪಂಚಾಯತ್ ಪೆರಾಜೆಯ ಸಹಕಾರದೊಂದಿಗೆ ಅ. ೧೦ ಹಮ್ಮಿಕೊಳ್ಳಲಾಯಿತು.
ಕೊಡಗು ಜಿಲ್ಲಾ ದಿಶಾ ಸಮಿತಿಯ ಸದಸ್ಯರಾದ ನಾಗೇಶ್ ಕುಂದಲ್ಪಾಡಿಯವರು ಭೇಟಿಯಾಗಿ ಸ್ವಚ್ಛತಾ ಕಾರ್ಯಕ್ಕೆ ಶುಭ ಹಾರೈಸಿದರು.

ಸಂಘದ ಅಧ್ಯಕ್ಷರಾದ ನಂದಕುಮಾರ್ ಅಡ್ಕ ಕಾರ್ಯದರ್ಶಿ ಪವನ್ ಬಂಗಾರಕೋಡಿ ಸದಸ್ಯರುಗಳಾದ ಬಾಲಕೃಷ್ಣ ತೊಕ್ಕುಳಿ, ಲೋಕೇಶ್ ಹೊದ್ದೆಟ್ಟಿ, ಮಹಾಬಲ ನಿಡ್ಯಮಲೆ, ಸತೀಶ್ ಬಂಗಾರಕೋಡಿ, ಮನೋಜ್ ಪೀಚೆ, ಶಿವರಾಯ ಗುಡ್ಡೆಮನೆ, ವಸಂತ ಕರಿಂಬಿ, ವಿನಯ ಬಂಗಾರಕೋಡಿ, ಧರ್ಮಪಾಲ ಕಾಪಿಲ, ಮೋಹನ್ ಬಂಗಾರಕೋಡಿ, ಮಹಾಬಲ ಕಾಪಿಲ, ಕಿಶೋರ್ ಪೀಚೆ, ಜತ್ತಪ್ಪ ಯಾಪಾರೆ, ಪದ್ಮಯ ಅಡ್ಕ, ಹರ್ಷ ಬಂಗಾರಕೋಡಿ ರವರು ಭಾಗವಹಿಸಿದ್ದರು. ಪದ್ಮಯ್ಯ ಅಡ್ಕ ವಂದಿಸಿದರು.