ಅಧ್ಯಕ್ಷರಾಗಿ ನೂತನ ಪ್ರವೀಣ್ ನೆಟ್ಟರ್ ಕಾರ್ಯದರ್ಶಿಯಾಗಿ ಹರೀಶ್ ದೋಳ ಆಯ್ಕೆ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸುಳ್ಯ ಗುರುಸ್ಪೂರ್ತಿ ಕಾರ್ಯಕ್ರಮ ಮತ್ತು ಘಟಕದ ವಾರ್ಷಿಕ ಮಹಾಸಭೆಯು














ಅ.11ರಂದು ಲೋಹಿತ್ ರೆಂಜಾಳರ ನಿವಾಸ ರೆಂಜಾಳದಲ್ಲಿ ಮಹೇಶ್ ಕಲ್ಪಣೆ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯದರ್ಶಿಯಾದ ರಂಜಿತ್ ದರ್ಕಾಸ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿಯಾದ ಹರೀಶ್ ದೋಳ ಲೆಕ್ಕಾಚಾರ ವಿವರ ನೀಡಿದರು. 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣಾ ಸಮಿತಿಯ ಶಿವಪ್ರಸಾದ್ ಕೆ.ವಿ ಯವರು ನಡೆಸಿಕೊಟ್ಟರು. ಘಟಕದ ಹೊಸ ಅಧ್ಯಕ್ಷರಾಗಿ ಶ್ರೀಮತಿ ನೂತನ ಪ್ರವೀಣ್ ನೆಟ್ಟಾರು,
ಕಾರ್ಯದರ್ಶಿಯಾಗಿ ಹರೀಶ್ ದೋಳ, ಕೋಶಾಧಿಕಾರಿಯಾಗಿ ರಂಜಿತ್ ದರ್ಕಾಸ್,
ಉಪಾಧ್ಯಕ್ಷರಾಗಿ ನವೀನ್ ರಾಮಕುಮೇರಿ,
ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಅಶ್ವಿನಿ ಲೋಕೇಶ್ ರನ್ನು ಆಯ್ಕೆಮಾಡಲಾಯಿತು.
ವ್ಯಕ್ತಿತ್ವ ನಿರ್ದೇಶಕರಾಗಿ- ಉಮೇಶ್ ಮಣಿಕ್ಕಾರ
ಕ್ರೀಡಾ ನಿರ್ದೇಶಕರಾಗಿ ಅಶೋಕ್ ಸುವರ್ಣ ಐವರ್ನಾಡು
ಸಮಾಜ ಸೇವಾ ನಿರ್ದೇಶಕರಾಗಿ ಶ್ರೀಮತಿ ಶಶಿಕಲಾ ಎ ನೀರಬಿದಿರೆ
ಆರೋಗ್ಯ ನಿರ್ದೇಶಕರಾಗಿ ಪ್ರಕಾಶ್ ಪಾಲ್ತಾಡು
ಪ್ರಚಾರ ನಿರ್ದೇಶಕರಾಗಿ ವಿಜೇತ್ ಪರಗುತ್ತು
ವಿದ್ಯಾನಿಧಿ ನಿರ್ದೇಶಕರಾಗಿ ಸುಂದರ್ ಪೂಜಾರಿ ಸುಳ್ಯ
ಕಲೆ ಮತ್ತು ಸಾಂಸ್ಕೃತಿಕ ನಿರ್ದೇಶಕರಾಗಿ ಪ್ರದೀಪ್ ನೆಟ್ಟಾರು
ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾಗಿ- ಕು.ಶ್ರಾವ್ಯ ಬಿ.ಆರ್
ಮಹಿಳಾ ಸಂಘಟನಾ ನಿರ್ದೇಶಕರಾಗಿ- ಶ್ರೀಮತಿ ಕುಸುಮ ರೆಂಜಾಳ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ರವಿಚಂದ್ರ ಸುವರ್ಣ
ನಾರಾಯಣ ಗುರುತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು- ರಮೇಶ್ ಜಯನಗರ
ಸಂಘಟನಾ ಕಾರ್ಯದರ್ಶಿಗಳಾಗಿ-
ಶ್ರೀಮತಿ ಚಂದ್ರಾವತಿ ಎ.ಎಸ್
ಬಾಲಕೃಷ್ಣ ತಡಗಜೆ, ಪ್ರಭಾಕರ ಕುತ್ಯಾಡಿ,
ಲವಿನ್ ಸುಳ್ಯ,
ಶ್ರೀಮತಿ ಚಂದ್ರಾವತಿ ಕಲ್ಪಣೆ
ಇವರನ್ನು ಆಯ್ಕೆಮಾಡಲಾಯಿತು. ನೂತನ ತಂಡವನ್ನು ಅಭಿನಂದಿಸಲಾಯಿತು. ಪದಗ್ರಹಣ ಕಾರ್ಯಕ್ರಮವನ್ನು ನವಂಬರ್ 22 ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಸ್ಥಾಪಕ ಅಧ್ಯಕ್ಷರಾದ ಶಿವಪ್ರಸಾದ್ ಕೆ.ವಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನಾರಾಯಣ ಗುರುತತ್ವ ಪ್ರಚಾರ ನಿರ್ದೇಶಕರಾದ ಲೋಹಿತ್ ರೆಂಜಾಳ, ಸಂಘಟನಾ ಕಾರ್ಯದರ್ಶಿಯಾದ ಸುಂದರ ಪೂಜಾರಿ ಅಂಗಣ ಉಪಸ್ಥಿತರಿದ್ದರು.







