ಅಜ್ಜಾವರ: ಮುಳ್ಯ – ಯಾಗಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಶಾಸಕರಿಗೆ ಮನವಿ

0

ಅಜ್ಜಾವರ ಗ್ರಾಮದ ಮುಳ್ಯ – ಯಾಗಿ ಸಂಪರ್ಕದ ರಸ್ತೆಯು ಹದಗೆಟ್ಟಿದ್ದು ದುರಸ್ತಿ ಕಾಮಗಾರಿ ನಡೆಸುವಂತೆ ಸ್ಥಳೀಯ ಪ್ರಮುಖರಾದ ಉದ್ಯಮಿಗಳು ಯಾಗಿ ಡೆವೆಲಪರ್ಸ್ ನ ಶ್ರೀಕೃಷ್ಣ ಸೋಮಯಾಗಿ ಯವರು ಶಾಸಕಿ ಕು.ಭಾಗೀರಥಿ ಮುರುಳ್ಯರಿಗೆ ಮನವಿ ನೀಡಿದರು.

ಈ ಪರಿಸರದಲ್ಲಿ ತುಂಬಾ ಮನೆಗಳಿದ್ದು ರಸ್ತೆಯಲ್ಲಿ ದಿನ ನಿತ್ಯ ಅನೇಕ ವಾಹನಗಳುಸಂಚರಿಸುತ್ತಿರುವುದರಿಂದ ಅತೀ ಅಗತ್ಯವಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದರು.