ಉದ್ದಂಪಾಡಿ ಕರುಣಾಕರರವರಿಗೆ ಶ್ರದ್ಧಾಂಜಲಿ – ವೈಕುಂಠಸಮಾರಾಧನೆ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಐವರ್ನಾಡು ಗ್ರಾಮದ ಉದ್ದಂಪಾಡಿ ಕರುಣಾಕರರವರು ಅ.06 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠಸಮಾರಾಧನೆ ಅ.17 ರಂದು ಮನೆಯಲ್ಲಿ ನಡೆಯಿತು.


ನಿವೃತ್ತ ಶಿಕ್ಷಕ ಬಟ್ಯ ನಾಯ್ಕರವರು ದಿ.ಕರುಣಾಕರರವರ ಆದರ್ಶ ಗುಣಗಳ ಮತ್ತು ಜೀವನದ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ದಿ.ಕರುಣಾಕರರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ
ಮೃತರ ತಾಯಿ ಶ್ರೀಮತಿ ಸರಸ್ವತಿ ,ಪತ್ನಿ ಶ್ರೀಮತಿ ಅಶ್ವಿನಿ ಎಂ, ಪುತ್ರರಾದ ‌‌ ಸಚಿತ್ ,ಚೇತನ್,ಪ್ರತೀಕ್ ,ಸಹೋದರಿ,ಸಹೋದರರು,ಕುಟುಂಬಸ್ಥರು ಉಪಸ್ಥಿತರಿದ್ದರು.