













ಕರ್ನಾಟಕ ಸರಕಾರ, ಯೋಗ ದಸರಾ ಉಪ ಸಮಿತಿ 2026 ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದ ಕಾಳಿಂಗರಾವ್ ಸಭಾಭವನದಲ್ಲಿ ಅ. 16 ರಂದು ನಡೆದ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಯ 10 ರಿಂದ 12 ವರ್ಷದ ಬಾಲಕರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಆಶ್ರೀತ್ ಅಮೆಮನೆ ಟ್ರಡಿಷನಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸೆಂಟ್ರಲ್ ಸ್ಕೂಲ್ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈತ, ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಸಂತೋಷ್ ಮುಂಡಕಜೆ ಮತ್ತು ಪ್ರಶ್ವಿಜಾ ಸಂತೋಷ್ ರವರ ಶಿಷ್ಯ. ಚೇತನ್ ಅಮೆಮನೆ ಮತ್ತು ದಿವ್ಯಾ ಚೇತನ್ ರವರ ಪುತ್ರ.







