ಮುರುಳ್ಯ: ಕ್ಷೀರಾ ಮಿಲ್ಕ್ ಮಾಸ್ಟರ್ ಸಂಸ್ಥೆಗಳಲ್ಲಿ ಆಯುಧ ಪೂಜೆ, ವಾಹನ ಪೂಜೆ

0

ಮುರುಳ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಶೋಧಕ ಮಿಲ್ಕ್ ಮಾಸ್ಟರ್ ಖ್ಯಾತಿಯ ನಿವೃತ್ತ ಶಿಕ್ಷಕರಾದ ಪಲ್ಲತಡ್ಕ ದಿ ರಾಘವ ಗೌಡರು ಹುಟ್ಟು ಹಾಕಿದ ಕ್ಷೀರಾ ಇಂಜಿನಿಯರಿಂಗ್ ವರ್ಕ್ಸ್ ಹಾಗೂ ಕ್ಷೀರಾ ಎಂಟರ್ಪ್ರೈಸಸ್ ನಲ್ಲಿ 18ರಂದು ವೇದಮೂರ್ತಿ ಪ್ರಶಾಂತ್ ಪರ್ಲತ್ತಾಯರ ಬಳಗ ವೈದಿಕ ಕಾರ್ಯ ಕ್ರಮಗಳೊಂದಿಗೆ ಆಯುಧ ಪೂಜೆ , ವಾಹನ ಪೂಜೆ ನಡೆಯಿತು.

ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್, ಮಾಲಕರುಗಳಾದ ಕುಸುಮಾಧರ ಕೆಪಳಕಜೆ ಮತ್ತು ಶ್ರೀಮತಿ ಮೈನಾ ಕುಸುಮಾಧರ, ಯತೀಶ್ ಪಾಲೋಳಿ ಮತ್ತು ಶ್ರೀಮತಿ ಮಧು ಯತೀಶ್, ಕುಟುಂಬದವರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ದಾಸಪ್ಪ ಗೌಡ, ಶ್ರೀಮತಿ ಮೋಹಿನಿ ದಾಸಪ್ಪ, ನಿವೃತ್ತ ಮುಖ್ಯ ಶಿಕ್ಷಕ ಶಾಂತಪ್ಪಗೌಡ, ಶ್ರೀಮತಿ ಕಮಲಾ ಶಾಂತಪ್ಪ ಪಾಲೋಳಿ. ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಗೌಡ ಪಾಲೋಳಿ, ಶ್ರೀಮತಿ ಶ್ರೀಲತಾ ಬಾಲಕೃಷ್ಣ, ನಿವೃತ್ತ ಮುಖ್ಯ ಶಿಕ್ಷಕರಾದ ಪುರುಷೋತ್ತಮ ಗೌಡ, ನಿವೃತ್ತ ಶಿಕ್ಷಕ ವೆಂಕಪ್ಪಗೌಡ ಆಲಾಜೆ, ಶ್ರೀಮತಿ ನಂದಿನಿ ಭವಾನಿ ಶಂಕರ್ ಪಾಲೋಳಿ, ರಾಮಚಂದ್ರ ಪಲ್ಲತಡ್ಕ, ಶ್ಶ್ರೀಮತಿ ಜಯಶ್ರೀ ರಾಮಚಂದ್ರ, ಶ್ರೀಮತಿ ಮಾಲಿನಿ ವಿನಯ ಕುಮಾರ್, ವಿನಯಕುಮಾರ್ ಪಲ್ಲತ್ತಡ್ಕ, ಲೋಕನಾಥ ಹುದೇರಿ , ರೋಹಿತಶ್ವ ಹುದೇರಿ, ಹಾಗೂ ಕುಟುಂಬ ಸದಸ್ಯರು, ಕಚೇರಿ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
ವರದಿ : ಸಂಕಪ್ಪ ಸಾಲಿಯಾನ್