













ಸುಳ್ಯ ಶಾರದಾ ಸೇವಾ ಟ್ರಸ್ಟ್, ಸಾರ್ವಜನಿಕ ಶಾರದಾಂಬ ಸೇವಾ ಸಮಿತಿ,ದಸರಾ ಉತ್ಸವ ಸಮಿತಿ,ಶಾರದಾಂಬ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಸುಳ್ಯ ದಸರಾ ಉತ್ಸವದ ಪ್ರಯುಕ್ತ ಅ.19 ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಳ್ಯದ ರಂಗಮಯೂರಿ
ಕಲಾ ಶಾಲೆಯ ಕಲಾ ತಂಡದವರಿಂದ ವಿವಿಧ ರೀತಿಯ ಸಾಂಸ್ಕೃತಿಕ
ರಸ ಸಂಜೆ ಪ್ರದರ್ಶನವಾಯಿತು.

ರಂಗನಿರ್ದೇಶಕ ಲೋಕೇಶ್ ಊರುಬೈಲು ರವರ ನಿರ್ದೇಶನದಲ್ಲಿವ ರಂಗಮಯೂರಿಯ ವಿದ್ಯಾರ್ಥಿಗಳಿಂದ ಸಂಜೆ ಗಂಟೆ 7.00 ರಿಂದ ಸುಮಾರು 100 ಕ್ಕೂ ಮಿಕ್ಕಿ ಕಲಾವಿದರು ವಿವಿಧ ಕಲಾ ಪ್ರಕಾರಗಳಾದ ಸ್ವಾಗತ ನೃತ್ಯ,ಕ್ಲಾಸಿಕಲ್,ಸೆಮಿಕ್ಲಾಸಿಕಲ್, ಉಗ್ರ ನರಸಿಂಹ ನೃತ್ಯ ರೂಪಕ, ವೆಸ್ಟರ್ನ್, ಹಿಪ್ ಅಪ್ ಡಾನ್ಸ್ ಹಾಗೂ ಗಾಯಕರಾದ ಶಿವಪ್ರಸಾದ್ ಆಲೆಟ್ಟಿ ಮತ್ತು ಕು. ಸ್ನೇಹ ಶೆಟ್ಟಿ ಯವರಿಂದ ಸಂಗೀತ ಕಾರ್ಯಕ್ರಮವು ಅದ್ದೂರಿಯಾಗಿ ನಡೆದು ಸೇರಿದ ಪ್ರೇಕ್ಷಕರ ಮನಸೂರೆಗೊಂಡಿತು. ನೃತ್ಯ ನಿರ್ದೇಶಕರಾದ ವಿನೋದ್ ಕರ್ಕೇರ,ಝೀ ವಾಹಿನಿಯ ಡಿಕೆಡಿ ವಿನ್ನರ್ ರಾಹುಲ್ ರಾವ್ ರವರು ನೃತ್ಯ ಸಂಯೋಜಿಸಿದರು. ರಂಗಮಯೂರಿಯ ಕಲಾ ಶಾಲೆಯ ಸದಸ್ಯ ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಪೋಷಕ ಕಮಿಟಿಯ ಸದಸ್ಯರು ಸಹಕರಿಸಿದರು.







