













ಸುಳ್ಯ ಮೆಸ್ಕಾಂ ಸಹಾಯಕ ಇಂಜಿನಿಯರ್ ಕಚೇರಿಯಲ್ಲಿ ಪುರೋಹಿತ ಹರೀಶ್ ಭಟ್ ಅಲಂಗಾರು ಇವರ ಪೌರೋಹಿತ್ಯದಲ್ಲಿ ಆಯುಧಪೂಜೆ ಹಾಗೂ ವಾಹನ ಪೂಜೆ ಅ.೨೦ ರಂದು ನಡೆಯಿತು.

ಇಲಾಖೆಯ ಎಲ್ಲಾ ವಾಹನಗಳಿಗೆ , ಆಯುಧಗಳಿಗೆ ಪೂಜೆ ಸಲ್ಲಿಸಿ, ಆಗಮಿಸಿದವರಿಗೆ ಪ್ರಸಾದ ವಿತರಿಸಲಾಯಿತು.
ಇಲಾಖೆಯ ಸಹಾಯಕ ಇಂಜಿನಿಯರ್ ಸುಪ್ರೀತ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್, ಪುತ್ತೂರು ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಚಂದ್ರ,ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗ್ಯಾರಂಟಿ ಅನುಷ್ಠಾನ ಸಮಿತಿಯ ದ ಕ ಜಿಲ್ಲಾ ಅಧ್ಯಕ್ಷ ಭರತ್ ಮುಡೋಡಿ, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಪಿ ಎಸ್ ಗಂಗಾಧರ್, ಸದಸ್ಯರಾದ ಸುರೇಶ್ ಅಮೈ, ಮುಖಂಡರುಗಳಾದ ಹರೀಶ್ ಕಂಜಿಪಿಲ್ಲಿ, ಹರೀಶ್ ಉಬರಡ್ಕ, ಸುನಿಲ್ ಕೇರ್ಪಳ, ಪಿ ಎ ಮಹಮ್ಮದ್, ಜಿ ಕೆ ಹಮೀದ್ ಸಂಪಾಜೆ, ಎಸ್ ಕೆ ಹನೀಫ್, ಸುಂದರ ಪಾಟಾಜೆ, ನಿವೃತ್ತ ಮೆಸ್ಕಾಂ ಇಂಜಿನಿಯರ್ ಬೋರಯ್ಯ, ರಂಜಿತ್ ರೈ ಮೇನಾಲ ಮೊದಲಾದವರು ಭಾಗವಹಿಸಿದ್ದರು.








