ಎಲಿಮಲೆ ಅಕ್ಷಯ ಸ್ಟೀಲ್ & ಹಾರ್ಡ್ ವೇರ್ಸ್ ನಲ್ಲಿ ಆಯುಧ ಪೂಜೆ

0

ರಾಷ್ಟ್ರೀಯ ಕ್ರೀಡಾಪಟು ಭಾನವಿ ಪೈಲೂರು ಅವರಿಗೆ ಸನ್ಮಾನ

ಎಲಿಮಲೆಯ ಅಕ್ಷಯ ಸ್ಟೀಲ್ & ಹಾರ್ಡ್‌ವೇರ್ಸ್‌ ನಲ್ಲಿ ಆಯುಧ ಪೂಜೆ ಹಾಗೂ ಸನ್ಮಾನ, ನೆರವು ನೀಡಿಕೆ ಕಾರ್ಯಕ್ರಮವು ಇಂದು ನೆರವೇರಿತು.

ಅರ್ಚಕರಾದ ಉದಯಕೃಷ್ಣ ಸವಣೂರು ಅವರು ಆಯುಧ ಪೂಜೆ ನೆರವೇರಿಸಿದರು. ಆಯುಧ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರಂಜನ ಕೋಡ್ತುಗುಳಿ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಮೋಹನ್‌ ರಾಮ್‌ ಸುಳ್ಳಿ ಹಾಗೂ ಸುಳ್ಯ ಸುದ್ದಿ ಚಾನೆಲ್‌ ಮುಖ್ಯಸ್ಥ ದುರ್ಗಾ ಕುಮಾರ್‌ ನಾಯರ್‌ಕೆರೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ರಾಷ್ಟ್ರೀಯ ಕ್ರೀಡಾಪಟು ಭಾನವಿ ಪೈಲೂರು ಅವರನ್ನು ಸನ್ಮಾನಿಸಲಾಯಿತು. ಅವರ ಪರವಾಗಿ ತಂದೆ ಸುರೇಶ್‌ ಮತ್ತು ತಾಯಿ ಅನಿತಾ ರವರು ಸನ್ಮಾನ ಸ್ವೀಕರಿಸಿದರು.

ಅಸೌಖ್ಯದಲ್ಲಿರುವ ಮೋಹನ್‌ ದಾಸ್‌ ಗುಡ್ಡೆಮನೆಯವರಿಗೆ ಸಂಸ್ಥೆಯ ವತಿಯಿಂದ ನೆರವು ನೀಡಲಾಯಿತು.

ಸಂಸ್ಥೆಯ ಮಾಲಕರಾದ ಹೇಮನಾಥ ಕೋಡ್ತುಗುಳಿ ಸ್ವಾಗತಿಸಿ ಪ್ರಸ್ತಾವನೆ ಗೈದರು. ಸಿಬ್ಬಂದಿ ಅಶ್ವಿನಿ ಬಾಳುಗೋಡು ವರದಿ ವಾಚಿಸಿದರು. ಸಿಬ್ಬಂದಿ ಯೋಗರಾಜ್ ಬಾಜಿನಡ್ಕ ವಂದಿಸಿದರು. ಶಿಕ್ಷಕ ಮುರಳೀಧರ ಪುನ್ಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.