ಮಡಪ್ಪಾಡಿಯ ಹಾಡಿಕಲ್ಲಿನಲ್ಲಿ ಉಮಾಮಹೇಶ್ವರ ಮಹಿಳಾ ಕುಣಿತ ಭಜನಾ ತಂಡ ಉದ್ಘಾಟನೆ

0

ಮಡಪ್ಪಾಡಿ ಗ್ರಾಮದ ಹಾಡಿಕಲ್ಲು
ಎಂಬಲ್ಲಿ ಗೋಪಾಲಕೃಷ್ಣ ಪಾ ರೆಮಜಲು ರವರ ಮಾರ್ಗದರ್ಶನದಲ್ಲಿ ಉಮಾಮೇಶ್ವರ ಮಹಿಳಾ ಕುಣಿತ ಭಜನಾ ತಂಡವನ್ನು ತರಬೇತುದಾರರಾದ ಆನಂದ ಬಳ್ಪ ಹಾಗೂ ಹಿರಿಯರಾದ ಧರ್ಮಪಾಲ ಮುಂಡೋಡಿ, ಸತ್ಯನಾರಾಯಣ ಮುಂಡೋಡಿ, ಜಯಪ್ರಕಾಶ್ ಮುಂಡೋಡಿ, ವಿನಯಕುಮಾರ್ ಮುಂಡೋಡಿಯವರ ಉಪಸ್ಥಿತಿಯಲ್ಲಿ ಉದ್ಘಾಟನೆ ಗೊಂಡಿತು.

ಮಡಪ್ಪಾಡಿ ಗ್ರಾಮಪಂಚಾಯತ್
ಮಾಜಿ ಅಧ್ಯಕ್ಷರಾದ ಉಷಾ ಜಯರಾಮ ಪಾಲ್ತಾಡು ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಕುಣಿತ ಭಜನೆಯಲ್ಲಿ ಮಂಡಳಿ ಅಧ್ಯಕ್ಷರಾದ ಪ್ರಿಯ ಮುಂಡೋಡಿ, ಹೇಮ ವಾಲ್ತಾಜೆ, ದಮಯಂತಿ ಅಂಬೆಕಲ್ಲು, ಗೀತಾ ದೇವಶ್ಯ, ನಯನಕುಮಾರಿ ಮುಂಡೋಡಿ, ಶೀಲ ಕುತ್ಯಾಳ, ರೂಪ ಕುತ್ಯಾಳ, ಗಿರಿಜಾ ಹಾಡಿಕಲ್ಲು, ಲೋಕೇಶ್ವರಿ ಹಾಡಿಕಲ್ಲು, ಸುಂದರಿ ಹಾಡಿಕಲ್ಲು, ಅಶ್ವಿನಿ ಹಾಡಿಕಲ್ಲು, ಮೀನಾಕ್ಷಿ ನೂಜಾಲ, ವಾರಿಜಾ ನೂಜಾಲ, ಲೀಲಾವತಿ ಹಾಡಿಕಲ್ಲು ಮತ್ತು ಮಕ್ಕಳು ಭಾಗವಹಿಸಿದ್ದರು.