













ಶ್ರೀ ಶಾರದಾಂಬಾ ಭಜನಾ ಮಂಡಳಿ (ರಿ.) ಪಂಜ, ಶ್ರೀ ಶಾರದೋತ್ಸವ ಸಮಿತಿ-2026 ಇದರ ಆಶ್ರಯದಲ್ಲಿ ಪಂಜ ಪರಿಸರದ ನಾಡಹಬ್ಬ17ನೇ ವರ್ಷದ ಶ್ರೀ ಶಾರದೋತ್ಸವವು ಅ. 21 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಿತು .ಸಂಜೆ ಶ್ರೀ ಶಾರದಾಮಾತೆಯ ವೈಭವದ ಶೋಭಾಯಾತ್ರೆ ನಡೆದು ಪಲ್ಲೋಡಿಯಲ್ಲಿ
ಪಂಜ ಹೊಳೆಯ ನಾಗತೀರ್ಥ ಸಂಗಮದ ಸಮೀಪ ಜಲಸ್ತಂಭನ ನಡೆಯಿತು.

ಶೋಭಾಯಾತ್ರೆಗೆ ತೆಂಗಿನಕಾಯಿ ಒಡೆದು ಚಾಲನೆ ನೀಡಲಾಯಿತು.

ಶೋಭಾಯಾತ್ರೆಯಲ್ಲಿ
ವಿವಿಧ ಕುಣಿತ ಭಜನೆ ತಂಡಗಳಿಂದ
ಕುಣಿತ ಭಜನೆ, ಶ್ರೀ ಶಾರದಾಂಬಾ ಜಾನಪದ ಕಲಾ ತಂಡ ಪಂಜ ಇವರಿಂದ
ಹುಲಿವೇಷ, ಹಿಂಜಾವೇ ನಾಸಿಕ್ ಟೀಮ್ ಪಂಜ ಇವರಿಂದ ನಾಸಿಕ್ ಬ್ಯಾಂಡ್ ಪ್ರದರ್ಶನ, ಸ್ತಬ್ದ ಚಿತ್ರ, ಗೊಂಬೆ ವಿಶೇಷ ಆಕರ್ಷಣೆಯಾಗಿತ್ತು.












