ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಆಕಾಂಕ್ಷ ಕಜೆಗದ್ದೆ ಆಯ್ಕೆ

0

ಕರ್ನಾಟಕ ಸರ್ಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕೊಡ ಮಾಡುವ ಶಿಷ್ಯ ವೇತನಕ್ಕೆ ಭರತನಾಟ್ಯ ಪ್ರಕಾರದಲ್ಲಿ ಆಕಾಂಕ್ಷ ಕಜೆಗದ್ದೆ ಆಯ್ಕೆಯಾಗಿದ್ದಾರೆ.

ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕರಾದ ನೃತ್ಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ಹಾಗೂ ವಿದ್ವಾನ್ ಗಿರೀಶ್ ಕುಮಾರ್ ಇವರ ಶಿಷ್ಯೆಯಾಗಿರುವ ಈಕೆ
ಭರತನಾಟ್ಯದಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದು ಇದೀಗ ವಿದ್ವತ್ ಪೂರ್ವ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ.

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ ಎಸ್ ಸಿ ಪದವಿಯನ್ನು ಓದುತ್ತಿರುವ ಇವರು, ಕನಕಮಜಲು ಗ್ರಾಮದ ಗಣೇಶ್ ಕಜೆಗದ್ದೆ ಮತ್ತು ಶಿಕ್ಷಕಿ ಹೇಮಲತಾ ದಂಪತಿಗಳ ಪುತ್ರಿ.