175 ಸ್ಪರ್ಧಿಗಳು ಭಾಗಿ














ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಮುಂದಿನ ತಿಂಗಳು ನಡೆಯಲಿರುವ 73ನೇ ಜಿಲ್ಲಾ ಮಟ್ಟದ ಸಹಕಾರ ಸಪ್ತಾಹದ ಪ್ರಯುಕ್ತ ಮ್ಯಾರಥಾನ್ ಸ್ಪರ್ಧೆ ಅ.25ರಂದು ನಡೆಯಿತು. ಆರೋಗ್ಯಕರ ಜೀವನಕ್ಕೆ
ಮ್ಯಾರಥಾನ್ ಒಂದು ಹೆಜ್ಜೆ
ಎಂಬ ಧ್ಯೇಯದೊಂದಿಗೆ
ಮಂಡೆಕೋಲು ಗ್ರಾಮ ಮಟ್ಟದಲ್ಲಿ ಮ್ಯಾರಥಾನ್ ಏರ್ಪಡಿಸಲಾಗಿತ್ತು.
18 ವರ್ಷಕ್ಕಿಂತ ಕೆಳಗಿನವರು,18 ರಿಂದ 40 ವರ್ಷ ಒಳಗಿನವರು, 40 ವರ್ಷಕ್ಕಿಂತ ಮೇಲ್ಪಟ್ಟವರು ಎಂಬಂತೆ ಮೂರು ವಿಭಾಗಗಳಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಮ್ಯಾರಥಾನ್ ಓಟಗಾರ ವಿನಯ ನಾರಾಲು ಮ್ಯಾರಥಾನ್ಗೆ ಚಾಲನೆ ನೀಡಿದರು.ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ಮಂಡೆಕೋಲು
ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಉಪಾಧ್ಯಕ್ಷ ಪುರುಷೋತ್ತಮ ಕಾಡುಸೊರಂಜ, ನಿರ್ದೇಶಕರುಗಳಾದ ಲಕ್ಷ್ಮಣ ಉಗ್ರಾಣಿಮನೆ, ಉಮೇಶ್ ಮೇಲ್ಮನೆ, ರಾಜಣ್ಣ ಪೇರಾಲುಮೂಲೆ, ಲಿಂಗಪ್ಪ ಬದಿಕಾನ, ಜಯಶ್ರೀ ಚೌಟಜೆ, ತುಳಸಿನಿ ದೇವರಗುಂಡ, ಆಶಿಕ್ ದೇವರಗುಂಡ, ಶಶಿಧರ ಕಲ್ಲಡ್ಕ,ಸದಾನಂದ ಮಡಿವಾಳಮೂಲೆ, ಉಪಸ್ಥಿತಿ ಇದ್ದರು, ಮಾಜಿ ಅಧ್ಯಕ್ಷರಾದ ಶಿವಪ್ರಸಾದ್ ಉಗ್ರಾಣಿಮನೆ , ರಾಮಕೃಷ್ಣ ರೈ ಪೇರಾಲಗುತ್ತು, ಪಂಚಾಯತ್ ನ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತಿದ್ದರು. ಸುಮಾರು 175 ಸ್ಪರ್ದಾಳುಗಳು ಭಾಗವಹಿಸಿದ್ದರು ಭಾಗವಹಿಸಿದ್ದರು. ಸಂಘದ ಮುಖ್ಯದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ ಸ್ವಾಗತಿಸಿದರು.
ಭಾಗವಹಿಸಿದ ಎಲ್ಲರಿಗೂ ಕೂಡ ಪ್ರಮಾಣ ಪತ್ರವನ್ನು ನೀಡಲಾಯಿತು.







