ಕಡೆಪಾಲ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ಚಾಲಕ ಅಪಾಯದಿಂದ ಪಾರು

0

ಕಲ್ಲುಗುಂಡಿ ಸಮೀಪದ ಕಡೆಪಾಲ ಸ್ವಾಮಿಕೊರಜ್ಜ ದೈವಸ್ಥಾನದ ದ್ವಾರದ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಅ.26 ರಂದು ನಡೆದಿದೆ.

ಮಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಲಾರಿ ಕಲ್ಲುಗುಂಡಿಯ ಕಡೆಪಾಲ ಸ್ವಾಮಿಕೊರಗಜ್ಜ ದೈವಸ್ಥಾನದ ದ್ವಾರದ ತಿರುವಿನಲ್ಲಿ ತಲುಪುತ್ತಿದ್ದಂತೆ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ರಸ್ತೆಗೆ ಅಡ್ಡಲಾಗಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ _ ಕ್ಲೀನರ್ ಸೇರಿದಂತೆ 3 ಮಂದಿ ಅಪಾಯದಿಂದ ಪಾರಾಗಿದ್ದಾರೆ.