ಮುರುಳ್ಯ ರಕ್ತೇಶ್ವರಿ ಸಾನಿಧ್ಯವಿರುವ ಕೃಷಿಭೂಮಿಯನ್ನು ವಕ್ಫ್ ಬೋರ್ಡ್ ಗೆ ಕಾಯ್ದಿರಿಸಿದ್ದಾರೆಂಬ ಪ್ರಕರಣ

0

ಹಿಂದೂ ಹಿತರಕ್ಷಣಾ ಸಮಿತಿ ಮುರುಳ್ಯ ಹೆಸರಲ್ಲಿ ಪ್ರತಿಭಟನೆಗೆ ನಿರ್ಧಾರ

ಪ್ರತಿಭಟನೆಗೆ ಬಿಜೆಪಿ ಬೆಂಬಲ ಘೋಷಣೆ

*ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದಲ್ಲಿ ರಕೇಶ್ವರಿ ದೇವಿಯ ಸಾನಿಧ್ಯವುಳ್ಳ ಹಿಂದೂಗಳ ಕೃಷಿ ಭೂಮಿಯನ್ನು ಮುಸ್ಲಿಂ ದಫನ ಭೂಮಿಯನ್ನಾಗಿ ಮಾಡಲು ವಕ್ಫ್ ಬೋರ್ಡ್ ಗೆ ದಫನ ಭೂಮಿಯನ್ನಾಗಿ ಕಾಯ್ದಿರಿಸಿ ಆದೇಶ ಹೊರಡಿಸಲಾಗಿದ್ದು ಇದರ ವಿರುದ್ಧ ಹಿಂದೂ ಹಿತರಕ್ಷಣಾ ವೇದಿಕೆ, ಮುರುಳ್ಯ ವತಿಯಿಂದ ಅ.28 ರಂದು ನಡೆಸಲುದ್ದೇಶಿಸಿರುವ ಪ್ರತಿಭಟನಾ ಸಭೆಗೆ ಸುಳ್ಯ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಬಿ.ಜೆ.ಪಿ. ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಭೂಮಿಯು ನೂರಾರು ವರ್ಷಗಳಿಂದ ಹಿಂದೂಗಳು ಕೃಷಿ ಮಾಡಿಕೊಂಡು ಬಂದಿರುವ ಭೂಮಿಯಾಗಿದ್ದು, ರಕ್ತೇಶ್ವರಿ ದೇವಸ್ಥಾನದ ಸಮೀಪದಲ್ಲಿದೆ. ಯಾವುದೇ ದಾಖಲೆ, ವಿಚಾರಣೆ ಇಲ್ಲದೆ ಏಕಾಏಕಿ ವಕ್ಫ್ ಬೋರ್ಡ್ ತನ್ನ ಆಸ್ತಿ ಎಂದು ಘೋಷಿಸಿರುವುದು ಖಂಡನೀಯವಾಗಿದ್ದು, ಇದು ಹಿಂದೂ ಸಮಾಜದ ಮೇಲೆ ನಡೆದ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಅ.28 ರಂದು ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯಲಿರುವ ಪ್ರತಿಭಟನಾ ಸಭೆಗೆ ಬಿ.ಜೆ.ಪಿ. ಸಂಪೂರ್ಣ ಬೆಂಬಲ ಘೋಷಿಸಿದೆ ” ಎಂದು ವೆಂಕಟ್ ವಳಲಂಬೆ ಕರೆ ನೀಡಿದ್ದಾರೆ.