ಸುತ್ತುಪೌಳಿ ರಚನಾ ಕಾಮಗಾರಿಗೆ ಅನುಮೋದನೆ ಸಂಭವ














ಕುಕ್ಕೇ ಶ್ರೀ ಸುಬ್ರಮಣ್ಯ ದೇವಸ್ಥಾನದ ವತಿಯಿಂದ ದತ್ತು ಸ್ವೀಕರಿಸಲ್ಪಟ್ಟಿರುವ, ಮುರುಳ್ಯ ಗ್ರಾಮದ ಪೂದೆ ಶ್ರೀ ಮಹಾಗಣಪತಿ ಮಲ್ಲಿಕಾರ್ಜುನ ಮತ್ತು ಶ್ರೀ ಮಹಾವಿಷ್ಣು ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಮತ್ತು ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪುನರ್ ನಿರ್ಮಾಣ ಮಾಡಲು ಜೀರ್ಣೋದ್ದಾರದ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅ.25 ರಂದು ಕುಕ್ಕೆ ಸುಬ್ರಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಮತಿ ಪ್ರವೀಣಾ ಪ್ರಶಾಂತ ರೈ ಮರುವಂಜರವರು ಪೂದೆ ದೇವಸ್ಥಾನಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ ಪರಿಶೀಲಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅನುದಾನದಿಂದ ಪೂದೆ ದೇವಸ್ಥಾನದಲ್ಲಿ ಈಗಾಗಲೇ ಆಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಬಿಲ್ ಬಾಕಿಯಾಗಿರುವ ಕುರಿತು ಮತ್ತು ಜನವರಿಯಲ್ಲಿ ಪೂದೆ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ನಡೆಯುವುದಕ್ಕಿಂತ ಮೊದಲು ಸುತ್ತುಪೌಳಿಯ ನಿರ್ಮಾಣ ಆಗಬೇಕಾಗಿರುವ ಹಿನ್ನೆಲೆಯಲ್ಲಿ ಕುಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರತಿನಿಧಿಯಾಗಿ ಶ್ರೀಮತಿ ಪ್ರವೀಣಾ ರೈಯವರು ಭೇಟಿ ನೀಡಿ ಪರಿಶೀಲಿಸಿದರೆಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಪೂದೆಯ ಈ ಜೋಡಿ ದೇವಳಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರುಗಳಾದ ಜಗದೀಶ್ ಹುದೇರಿ ಮತ್ತು ಭುವನೇಶ್ವರ ಪೂದೆ, ಗುತ್ತಿಗೆದಾರ ರಘುರಾಮ ಉಪ್ಪಂಗಳ , ಊರವರಾದ ಪುಟ್ಟಣ್ಣ ಆಚಾರ್ಯ ಪೂದೆ, ಪ್ರಶಾಂತ ಆದಿ ಮುರುಳ್ಯ, ಹರೀಶ್ ಹುದೇರಿ, ಲೋಕೇಶ್ ಶೇರ, ಉದಯಕುಮಾರ್ ಕಾಯೆರ್ತಡ್ಕ, ಜಗನ್ನಾಥ ಪೂಜಾರಿ ಇವರು ಉಪಸ್ಥಿತರಿದ್ದರು.







