ಅಧ್ಯಕ್ಷರಾಗಿ ಭರತ್ ಬೊಣ್ಯಕುಕ್ಕು : ಪ್ರಧಾನ ಕಾರ್ಯದರ್ಶಿಯಾಗಿ ಸೃಜನ್ ಅಡ್ಯತಕಂಡ ಆಯ್ಕೆ
ಮುಕ್ಕೂರು : ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಅ.25 ರಂದು ಸಂಜೆ ಮುಕ್ಕೂರು ವಠಾರದಲ್ಲಿ ನಡೆಯಿತು.














ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ಭರತ್ ಬೊಣ್ಯಕುಕ್ಕು, ಪ್ರಧಾನ ಕಾರ್ಯದರ್ಶಿಯಾಗಿ ಸೃಜನ್ ಅಡ್ಯತಕಂಡ ಆಯ್ಕೆಯಾದರು.
ಸಂಘದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹಾಗೂ ಹಿಂದಿನ ಅವಧಿಯ ಅಧ್ಯಕ್ಷರಾದ ರವೀಂದ್ರ ಅನವುಗುಂಡಿ ಅವರ ಅವರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳು ಆಯ್ಕೆ ನಡೆಯಿತು.
ಸಮಿತಿಯ ಉಪಾಧ್ಯಕ್ಷರಾಗಿ ಕುಸುಮಾಧರ ಪೂಜಾರಿ ಮುಕ್ಕೂರು, ಜತೆ ಕಾರ್ಯದರ್ಶಿಯಾಗಿ ಪ್ರವೀಣ್ ಬಿ., ಕೋಶಾಧಿಕಾರಿಯಾಗಿ ಪ್ರಶಾಂತ ರೈ ಬೋಳಕುಮೇರು ಆಯ್ಕೆಯಾದರು. ಇದೇ ಸಂದರ್ಭದಲ್ಲಿ 25 ಮಂದಿ ಗೌರವ ಸಲಹೆಗಾರ ಆಯ್ಕೆಗೆ ನಿರ್ಣಯ ಕೈಗೊಳ್ಳಲಾಯಿತು. ಈ ಹಿಂದೆ ಎರಡು ವರ್ಷದ ಅವಧಿಗೆ ನಿಗದಿಯಾಗಿದ್ದ ಪದಾಧಿಕಾರಿಗಳ ಅವಧಿಯನ್ನು ಮೂರು ವರ್ಷಕ್ಕೆ ವಿಸ್ತರಿಸಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.







